ಮತದಾರರ ಹೆಸರೇ ಮಾಯ
ಕಲಘಟಗಿ: ಇಲ್ಲಿನ ಪಪಂ ವ್ಯಾಪ್ತಿ ಹುಲಗಿನಕಟ್ಟಿ ತಾಂಡಾದ 141ನೇ ಮತಗಟ್ಟೆ ಕೇಂದ್ರದಲ್ಲಿ 56 ಮತದಾರರ ಹೆಸರು ಮತಪಟ್ಟಿಯಿಂದ ಮಾಯವಾಗಿದ್ದರಿಂದ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಧ್ಯಾಹ್ನದವರೆಗೆ ಮಂದಗತಿ ಮತದಾನವಾಯಿತು. ತಾಲೂಕಿನ ಒಟ್ಟು 145 ಮತಕೇಂದ್ರಗಳಲ್ಲಿ ನೀತಿಸಂಹಿತೆ, ಪೊಲೀಸ್ ಬಂದೋಬಸ್ತ್ ನಡುವೆ ಶೇ. 70 ಮತದಾನವಾಗಿದೆ. ತಾಲೂಕಿನ ದೇವಿಕೊಪ್ಪ, ಜುಂಜನಬೈಲ, ದಾಸ್ತಿಕೊಪ್ಪ, ಹುಲಗಿನಕಟ್ಟಿ ತಾಂಡಾ, ಮಾಚಾಪೂರ ತಾಂಡಾ ಮುಂತಾದ ಗ್ರಾಮಗಳಲ್ಲಿ ಮುಂಜಾನೆಯಿಂದ ಮಧ್ಯಾಹ್ನದವರೆಗೂ ಮಂದಗತಿಯಲ್ಲಿ ಮತದಾನ ಕಂಡುಬಂದಿತು. ಇನ್ನು ಕೆಲ ಹೋಟೆಲ್, ಚಹಾ ಅಂಗಡಿಗಳಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರ ಬೆಟ್ಟಿಂಗ್ ನಡೆದಿದ್ದ ದೃಶ್ಯಗಳೂ ಕಡುಬಂದವು.