ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ
ನವಲಗುಂದ: ಇಲ್ಲಿಯ ರಾಜೀವ್ಗಾಂಧಿ ಕಾನ್ವೆಂಟ್ ಹೈಸ್ಕೂಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಗೀತಾ ಕಟ್ಟಿಮನಿ 595 ಅಂಕಗಳೊಂದಿಗೆ ಶೇ. 95.20ರಷ್ಟು ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ದ್ವಿತೀಯ ಸ್ಥಾನವನ್ನು ಶಿವರಾಜ ಜಾವೂರಮಠ 547 ಅಂಕ ಪಡೆದು ಶೇ.87.52ರಷ್ಟು, ಪವಿತ್ರಾ ಎಸ್. ತೋಟದ 546 ಅಂಕ ಪಡೆದು ಶೇ. 87.36ರಷ್ಟು ಅಂಕ ಪಡೆದು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು. ಆಪ್ರೀನ ನಧಾಪ್-546 ಶೇ. 84.32, ಸುಷ್ಮಾ ಇನಾಮತಿ-481 ಅಂಕ ಶೇ. 76.96, ಅಕ್ಷಯ ಸುಂಕದ 457 ಅಂಕ ಶೇ.73.12 ರಷ್ಟು ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದು, ಶಾಲೆಯ ಅಧ್ಯಕ್ಷ ಕೆ.ಎನ್. ಗಡ್ಡಿ ಮತ್ತಿತರರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.