ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕೆಎನ್‌ಕೆ ಪ್ರೌಢಶಾಲೆ ಶೇ. 96.52 ಸಾಧನೆ

Vishwanath S
Updated On : 8 May 2013, 3:43 am

ಧಾರವಾಡ: ಕಳೆದ ಏಪ್ರೀಲ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಕೆಎನ್‌ಕೆ ಬಾಲಕಿಯರ ಪ್ರೌಢಶಾಲೆ ಶೇ. 96.52ರಷ್ಟು ಸಾಧನೆ ಮಾಡಿದ್ದು, ಪ್ರಶಸ್ತಿ ಸಹಿತ 13, ಪ್ರಥಮ ದರ್ಜೆ 52, ದ್ವಿತೀಯ ದರ್ಜೆಯಲ್ಲಿ 22 ಹಾಗೂ ತೃತೀಯ ದರ್ಜೆಯಲ್ಲಿ 24 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶಾಲೆಯ ಜ್ಯೋತಿ ಅರಳಿಕಟ್ಟಿ (ಶೇ. 97.44), ಸ್ವಾತಿ ಮಡಿವಾಳರ (ಶೇ. 93.60), ಅಪೂರ್ವಾ ಪವಾಡಿ (ಶೇ. 93.44), ಪ್ರೀತಿ ತಳವಾರ (ಶೇ. 92.16), ಕೀರ್ತಿ ತಳವಾರ (ಶೇ. 90.72), ಐಶ್ವರ್ಯರಾಣಿ ಬಳಿಗೇರ (ಶೇ. 90.24) ದೀಪಾ ತಳಕಟ್ನಾಳ (ಶೇ. 90.08) ಶಿಲ್ಪಾ ಛಬ್ಬಿ (ಶೇ. 89.44) ಶ್ರೀದೇವಿ ಅಂಗಡಿ (ಶೇ. 89.22) ರೋಹಿಣಿ ಹೊಸಮನಿ, ರೂಪಾ ಪುರತಗೇರಿ, ಅಮ್ರೀನ್ ಸಾವಂತನವರ ಎಂಬ ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ ಎಂದು ಎಂ.ಕೆ. ನಾವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತ ಪ್ರೌಢಶಾಲೆ ಶೇ. 86.05 ಫಲಿತಾಂಶ
ಧಾರವಾಡ: ಪ್ರಸ್ತಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಭಾರತ ಪ್ರೌಢಶಾಲೆ ವಿದ್ಯಾರ್ಥಿಗಳು ಶೇ. 86.05ರಷ್ಟು ಉತ್ತಮ ಫಲಿತಾಂಶ ಮಾಡಿದ್ದಾರೆ. ಶಾಲೆಯ ಶಾರದಾ ಸಾಳುಂಕೆ (ಶೇ. 86.9) ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ದ್ವಿತೀಯ ಸ್ಥಾನವನ್ನು ಸುರೇಖಾ ವಾಡಕರ (ಶೇ. 82.28) ತೃತೀಯ ಸ್ಥಾನ ಚೈತ್ರಾ ಸಿಂಗನಾಥ (ಶೇ. 77.96) ಪಡೆದಿದ್ದಾರೆ. ಅದರಂತೆ ಅಕ್ಷತಾ ಜಾಧವ ಶೇ. 76.40, ಸಂತೋಷ ಗೋಪನಕೊಪ್ಪ ಶೇ. 74.1, ಕಿರಣ ರಾಠೋಡ ಶೇ. 71.1, ಅಕ್ಷತಾ ರಣಸಿಂಗ ಶೇ. 70.4, ಆಯಿಷಾ ದೊಡಮನಿ ಶೇ. 70, ಪ್ರವೀಣ ಪಟ್ಯಾಳ ಶೇ. 70, ರಾಧಾ ಮಾನೆ ಶೇ. 70 ಅಂಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಮನೋಹರ ಮೋರೆ, ಕಾರ್ಯಾಧ್ಯಕ್ಷ ಪಿ.ಎನ್. ಜಾಧವ, ಶಿವಾಜಿ ಘಾಟಗೆ, ಶಂಕರ ಶೇಳಕೆ, ಅಶೋಕ ಬಾಬರ ಅಭಿನಂದನೆ ಸಲ್ಲಿಸಿದ್ದಾರೆ.

ವನಿತಾ ಪ್ರೌಢಶಾಲೆ ಉತ್ತಮ ಫಲಿತಾಂಶ
ಧಾರವಾಡ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವನಿತಾ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡದ್ದಾರೆ. ಶಾಲೆಯ ಅಕ್ಷತಾ ಕಟ್ಟಿಮನಿ ಶೇ. 81.44ರಷ್ಟು ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಶಾರದಾ ಮಾದರ ಶೇ. 79.68, ಭಾಗ್ಯಶ್ರೀ ಕುಂಠೆ ಶೇ. 70.56, ಅಂಜುಮ್ ಗೋಲಂದಾಜ್ ಶೇ. 67.20 ಹಾಗೂ ಫಿನಾಜ್ ತಾಳಿಕೋಟಿ ಶೇ. 64.64ರಷ್ಟು ಅಂಕ ಗಳಿಸಿದ್ದಾರೆ ಎಂದು ನಿರ್ಮಲಾತಾಯಿ ಗೋಖಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾಪೋಷಕ ನೆರವು ಪಡೆದ ವಿದ್ಯಾರ್ಥಿಗಳ ಸಾಧನೆ
ಧಾರವಾಡ: ವಿದ್ಯಾಪೋಷಕ ಸಂಸ್ಥೆ 2012-13ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದ 325 ವಿದ್ಯಾರ್ಥಿಗಳಿಗೆ ಆಗತ್ಯವಿರುವ ಧನಸಹಾಯ, ಪುಸ್ತಕ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸಿ ಮಾರ್ಗದರ್ಶನ ನೀಡಿತ್ತು. ಈ ವಿದ್ಯಾರ್ಥಿಗಳ ಪೈಕಿ 75ಕ್ಕೂ ಹೆಚ್ಚು ಪ್ರತಿಭಾನ್ವಿತರು 2012-13ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಇವರೆಲ್ಲ ಕೃಷಿ ಕಾರ್ಮಿಕರು, ಮನೆಗೆಲಸ, ಕಟ್ಟಡ ಕೆಲಸ ಮಾಡುವವರು, ಬಡಿಗತನ, ಕಮ್ಮಾರಿಕೆ ಮುಂತಾದ ಕೆಲಸಗಳಲ್ಲಿ ತೊಡಗಿರುವ ಕುಟುಂಬದಿಂದ ಬಂದವರು. ಇವರಿಗೆ ವಿದ್ಯಾಪೋಷಕ ಸಂಸ್ಥೆ ಧನ ಸಹಾಯ ನೀಡುತ್ತಿದೆ. ಉದಾರ ದಾನಿಗಳು ಇಂತಹ ಹಲವು ಪ್ರತಿಭೆಗಳನ್ನು ಪೋಷಿಸುವಲ್ಲಿ ಭಾಗಿಯಾಗಬಹುದು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂ. 0836 2747357 ಸಂಪರ್ಕಿಸಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement