ಚೇತನ ಪಬ್ಲಿಕ್ ಸ್ಕೂಲ್ ಶೇ. 100 ಫಲಿತಾಂಶ
ಹುಬ್ಬಳ್ಳಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ದ್ಯಾವಪ್ಪನವರ-ವಾಳಸಂಗ ಎಜ್ಯುಕೇಶನ್ ಮತ್ತು ಅಕಾಡೆಮಿ ಟ್ರಸ್ಟ್ನ ಚೇತನ ಪಬ್ಲಿಕ್ ಸ್ಕೂಲ್ ಶೇ. 100ರಷ್ಟು ಸಾಧನೆ ಮಾಡಿದೆ.
ಶಾಲೆಯ 72 ವಿದ್ಯಾರ್ಥಿಗಳು ಡಿಸ್ಟಿಕ್ಷನ್, 62 ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಮೂವರು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, ನಾಲ್ವರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 141 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇವರಲ್ಲಿ 35 ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ನಾಗಮಣಿ ಗುಂಜಳ 609 (ಶೇ. 97.44) ಅಂಕ, ಗೌಸ ಹೊಸಮನಿ 608 (ಶೇ. 97.28) ಅಂಕ ಹಾಗೂ ದಾನೇಶ್ವರಿ ಮನ್ನಂಗಿ 602 (ಶೇ. 96.32) ಅಂಕ ಪಡೆದಿದ್ದಾರೆ.