ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ ಪೇಡ ತಿನ್ನಿಸಿ ಮನ್ನಿಸಿ ಎನ್ನುವೆ: ಹೊರಟ್ಟಿ

Mainashree
Updated On : 8 May 2013, 10:03 am

ಕ.ಪ್ರ.ವಾರ್ತೆ  ಹುಬ್ಬಳ್ಳಿ  ಮೇ 8
ಧಾರವಾಡ ಜಿಲ್ಲೆಯ ಮೂರು ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರದಿದ್ದರೆ ಬೆಂಗಳೂರಿಗೆ ಕಾಲಿಡುವುದಿಲ್ಲ ಎಂದು ಹೇಳಿದ್ದ ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತಿನಂತೆ ನಡೆದುಕೊಳ್ಳುವರೇ?
ಚುನಾವಣೆಯ ಫಲಿತಾಂಶ ಹೊರ ಬಿದ್ದ ಕ್ಷಣದಲ್ಲಿಯೇ ಇಂಥದೊಂದು ಪ್ರಶ್ನೆ ಎದುರಾಗಿದೆ. ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ಜೆಡಿಎಸ್‌ಗೆ ಉತ್ತಮ ಭವಿಷ್ಯವಿದೆ, ಜಿಲ್ಲೆಯ ಕನಿಷ್ಟ ಮೂರು ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆಂದು ಹೊರಟ್ಟಿ ವಿಶ್ವಾಸದಿಂದ ನುಡಿದಿದ್ದರು.
ಮೂವರನ್ನು ಗೆಲ್ಲಿಸಿಕೊಂಡು ಬರಲಾಗದಿದ್ದರೆ ಬೆಂಗಳೂರಿನತ್ತ ಮುಖ ಮಾಡುವುದಿಲ್ಲವೆಂದೂ ಬಹಿರಂಗ ಹೇಳಿಕೆ ನೀಡಿದ್ದರು. ಫಲಿತಾಂಶ ಪ್ರಕಟವಾಗಿದ್ದು ಜೆಡಿಎಸ್ ಧಾರವಾಡ ಜಿಲ್ಲೆಯ ನವಲಗುಂದ ಏಕೈಕ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆದರೆ ಇನ್ನುಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಸೋತಿದೆ. ಹೊರಟ್ಟಿ ಮಾತಿನಂತೆ ಇನ್ನೆರಡು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲಾಗಿಲ್ಲ. ಹಾಗಿದ್ದರೆ ಹೊರಟ್ಟಿ ಬೆಂಗಳೂರನತ್ತ ಮುಖ ಹಾಕುವುದಿಲ್ಲವೇ? ಅಥವಾ ಮಾತು ಮೀರಿ ಬೆಂಗಳೂರಿಗೆ ಹೋಗುತ್ತಾರೆಯೇ? ಎಂಬ ಕುತೂಹಲ ಭರಿತ ಪ್ರಶ್ನೆ ಎದುರಾಗಿದೆ.
ಈ ಬಗ್ಗೆ ಹೊರಟ್ಟಿಯವರೇನೆನ್ನುತ್ತಾರೆಂದು ತಿಳಿಯಲು ದೂರವಾಣಿ ಕರೆ ಮಾಡಿದರೆ, 'ಸುವರ್ಣ ನ್ಯೂಸ್‌'ನಲ್ಲಿ ತಾವು ಈ ರೀತಿ ಹೇಳಿಕೆ ನೀಡಿದ್ದೇನೋ ನಿಜ. ಚರ್ಚೆಯಲ್ಲಿ ನಾವು ಸೋತಿದ್ದೇವೆ. ಸುವರ್ಣ ನ್ಯೂಸ್ ಬಳಗ ಗೆದ್ದಿದೆ. ಸುವರ್ಣ ನ್ಯೂಸ್ ವಿಶ್ಲೇಷಣೆ ಸರಿಯಾಗಿದೆ. ನಾವು ವಿಶ್ಲೇಷಿಸುವಲ್ಲಿ ವಿಫಲರಾಗಿದ್ದೇವೆ. ಖುಷಿಯಿಂದ ಸೋಲು ಒಪ್ಪಿಕೊಂಡಿದ್ದೇನೆ. ಬೆಂಗಳೂರಿಗೆ ಧಾರವಾಡ ಪೇಡೆಯ ಸಮೇತ ಹೋಗಿ ಸುವರ್ಣ ನ್ಯೂಸ್ ಬಳಗಕ್ಕೆ ಮನ್ನಿಸಿ ಎನ್ನುವೆ. ಕಳೆದ ಚುನಾವಣೆಗೆ ಹೋಲಿಸಿದಾಗ ಜೆಡಿಎಸ್ ಜಿಲ್ಲೆಯಲ್ಲಿ ತುಂಬಾ ಬೆಳವಣಿಗೆ ಕಂಡಿದೆ ಎಂಬುದು ಗಮನಾರ್ಹ ಎಂದು ಹೊರಟ್ಟಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement