ಪಿಯುಸಿ: ವಿದ್ಯಾರ್ಥಿಗಳ ಸಾಧನೆ
ಧಾರವಾಡ: ಕಳೆದ ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಇಲ್ಲಿನ ವಿದ್ಯಾ ಪಿ. ಹಂಚಿನಮನಿ ಕಾಲೇಜಿನ 206 ವಿದ್ಯಾರ್ಥಿಗಳ ಪೈಕಿ 25 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 108 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. 600 ಅಂಕಗಳಿಗೆ ಕಾಲೇಜಿನ ಅಮರ ಮುರುಡೇಶ್ವರ 577, ಅಕ್ಷಯ ಪರ್ವತಿಕರ 571, ಅಭಿಷೇಕ್ ಸಂಗಮ 571, ವೃಷಭ ಮೈತ್ರಿ 568, ಪ್ರತೀಕ ಗದ್ದಿಗೌಡರ 567, ಶರಣಬಸವರಾಜ ಅಗಡಿ 564 ಅಂಕ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಈ ಸಾಧನೆಗಾಗಿ ಶಾಂತೇಶ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಕಾರ್ಯಾಧ್ಯಕ್ಷ ಪಿ.ಆರ್. ಹಂಚಿನಮನಿ ಮತ್ತು ಆಡಳಿತ ಮಂಡಳಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಇಲ್ಲಿನ ಆರ್ಎಲ್ಎಸ್ ಕಾಲೇಜಿನ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 95ರಷ್ಟು ಫಲಿತಾಂಶ ಪಡೆದಿದ್ದು, ಕಾಲೇಜಿನ 255 ವಿದ್ಯಾರ್ಥಿಗಳ ಪೈಕಿ 243 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಭಾವನಾ ಎಂ. ಶೇ. 85ರಷ್ಟು ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, ಮಲ್ಲಿಕಾರ್ಜುನ ಗೊರಬಾಳ ಶೇ. 79.6ರಷ್ಟು ಅಂಕಗಳಿಸಿ ದ್ವೀತಿಯ ಸ್ಥಾನದಲ್ಲಿದ್ದಾರೆ. ಅದರಂತೆ ಮಂಜುನಾಥ ಗೊರಬಾಳ ಶೇ. 78.85ರಷ್ಟು ಅಂಕಗಳಿಸಿ ತೃತೀಯ ಸ್ಥಾನದಲ್ಲಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದೀಪಾ ಗುಡ್ಡದಮಠ ಶೇ. 91ರಷ್ಟು ಫಲಿತಾಂಶ ಪಡೆದು ಪ್ರಥಮ, ಚಂದ್ರಶೇಖರ ಅಕ್ಕಿ ಶೇ. 89.1 ದ್ವಿತೀಯ, ಮುದಕಪ್ಪ ಉರಲ್ ಶೇ. 88ರಷ್ಟು ಅಂಕ ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.
ಸರ್ಕಾರಿ ಪಿಯು ಕಾಲೇಜು: ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಆರ್.ಎನ್. ಶೆಟ್ಟಿ ಆರವರಣದಲ್ಲಿನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಲಾ ವಿಭಾಗ ಶೇ. 82, ವಾಣಿಜ್ಯ ವಿಭಾಗ ಶೇ. 90 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. 75ರಷ್ಟು ಸಾಧನೆ ಮಾಡಿದೆ. ವಾಣಿಜ್ಯ ವಿಭಾಗದ ಮೇಘಾ ಹಳಕಟ್ಟಿ 600 ಅಂಕಗಳಿಗೆ 520 ಅಂಕ ಗಳಿಸಿದ್ದು, ವಿಜ್ಞಾನ ವಿಭಾಗದ ಸುನೀಲ್ಕುಮಾರ ಬಿ. 450 ಅಂಕ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಸಿಕಂದರ್ ಆಯಟ್ಟಿ 493 ಅಂಕಗಳಿಸುವ ಮೂಲಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.