ಗುಣಧರನಂದಿ ಶಾಲೆ ಉತ್ತಮ ಸಾಧನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 11
ತಾಲೂಕಿನ ವರೂರಿನ ರಾಷ್ಟ್ರಸಂತ ಶ್ರೀ ಗುಣಧರನಂದಿ ಮಹಾರಾಜರ ವಸತಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಶಾಲೆ ಶೇ. 100ರಷ್ಟು ಸಾಧನೆ ಮಾಡಿದೆ. ವಿದ್ಯಾರ್ಥಿಗಳಾದ ಅರ್ಪಿತಾ ಜೈನರ್ ಶೇ. 94.24, ಪದ್ಮನಗೌಡ ಪಾಟೀಲ ಶೇ. 90.24, ಪ್ರಿಯಾಂಕಾ ಬಸ್ತಿ ಶೇ. 87.52, ಶ್ವೇತಾ ಅಂಗಡಿ ಶೇ. 85.28 ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.