ಚಿಂಚನಸೂರಗೆ ಸಚಿವ ಸ್ಥಾನ ನೀಡಿ: ಆಗ್ರಹ
ಹುಬ್ಬಳ್ಳಿ: ಹಿಂದುಳಿದ ಕೋಲಿ ಸಮಾಜ ಕಾಂಗ್ರೆಸ್ ಬೆಂಬಲಿಸುತ್ತ ಬಂದಿದ್ದು, 5ನೇ ಬಾರಿ ಚುನಾಯಿತರಾದ ಸಮಾಜದ ಬಾಬುರಾವ ಚಿಂಚನಸೂರಗೆ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ರಾಜ್ಯ ಅಂಬಿಗ (ಗಂಗಾಮತ) ಸಮಾಜ ಸಮಿತಿ ಆಗ್ರಹಿಸಿದೆ. ಸಮಿತಿ ಗೌರವಾಧ್ಯಕ್ಷರಾದ ಬಾಬುರಾವ ಚಿಂಚನಸೂರ ಸಮಾಜದ ಬಗ್ಗೆ ಕಳಕಳಿ ಹೊಂದಿದ್ದಾರೆಂದು ಸಮಿತಿ ಅಧ್ಯಕ್ಷ ಶಿವಶರಣ ಅಂಬಿಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ ತಮ್ಮ ಸಚಿವ ಸಂಪುಟದಲ್ಲಿ ಇಬ್ಬರಿಗೆ ಸ್ಥಾನ ನೀಡಿದ್ದರು. ಈಗಲೂ ಸಮಾಜದ ಚಿಂಚನಸೂರಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಸಮಿತಿಯ ಎಫ್.ಇ. ಸುಣಗಾರ, ಟಿ.ಬಿ. ಕೋಳಿ, ಗಣೇಶ ಸುಲ್ತಾನಪುರ ಮತ್ತಿತರರು ಆಗ್ರಹಿಸಿದ್ದಾರೆ.