ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಾಳೆ ಬಸವ ಪ್ರಶಸ್ತಿ ಪ್ರದಾನ

Vishwanath S
Updated On : 12 May 2013, 11:03 am

ಕನ್ನಡಪ್ರಭ ವಾರ್ತೆ, ಗದಗ, ಮೇ 11
ಇಲ್ಲಿಯ ತೋಂಟದಾರ್ಯ ಮಠ ಹಾಗೂ ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಷ್ಠಾನದ ವತಿಯಿಂದ ಬಸವ ಜಯಂತಿ ಶತಮಾನೋತ್ಸವ ನಿಮಿತ್ತ ಮೇ 13ರಂದು ಸಂಜೆ 7.30ಕ್ಕೆ ತೋಂಟದಾರ್ಯ ಮಠದಲ್ಲಿ ಮಹಾ ಮಾನವತಾವಾದಿ ಬಸವೇಶ್ವರರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಚಂದ್ರಶೇಖರ ವಸ್ತ್ರದ ಹೇಳಿದರು.
ತೋಂಟದಾರ್ಯ ಮಠದಲ್ಲಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 13ರಂದು ಸಂಜೆ 7 ಗಂಟೆಗೆ 2119ನೇ ಶಿವಾನುಭವ ನಡೆಯಲಿದೆ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಮಹಾಮಾನವತಾವಾದಿ ಬಸವೇಶ್ವರ ಪ್ರಶಸ್ತಿಯನ್ನು ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಶಿಕಲಾ ಜೊಲ್ಲೆ ಅವರಿಗೆ ನೀಡಲಾಗುವುದು. ಬೆಳಗಾವಿಯ ರಾಣಿಚೆನ್ನಮ್ಮ ವಿವಿ ಕುಲಪತಿ ಬಿ.ಆರ್. ಅನಂತನ್ ದಂಪತಿ ಪ್ರಶಸ್ತಿ ಪ್ರದಾನ ನೆರವೇರಿಸುವರು. ಅನಂತರ ಈಚೆಗೆ ಐಎಎಸ್ ಪರೀಕ್ಷೆಯಲ್ಲಿ ಸಾಧನೆಗೈದ ದುಂದೂರಿನ ಜಗನ್ನಾಥ ಜಲರೆಡ್ಡಿ ಅವರನ್ನು ಸನ್ಮಾನಿಸಲಾಗುವುದು. ಅದೇ ದಿನ ಪೂರ್ವದಲ್ಲಿ ಬೆಳಗ್ಗೆ 8.30 ಗಂಟೆಗೆ ವಿವಿಧ ಸಂಘಟನೆಗಳಿಂದ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಬಸವಪಥ ಸಂಚಲನ ಜರುಗಲಿದೆ.
ಮೇ 14ರಂದು ಸಂಜೆ 7.30ಕ್ಕೆ 'ಶರಣಯುಗ-ಒಂದು ಚಿಂತನ' ಕುರಿತು ಹಾರೋಗೇರಿಯ ವೃಷಭೇಂದ್ರ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ವಿ.ಎಸ್. ಮಾಳಿ ಹಾಗೂ ಹಂಪಿಯ ಕನ್ನಡ ವಿವಿಯ ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ ಉಪನ್ಯಾಸ ನೀಡುವರು. ಎಂ. ಕೃಷ್ಣಪ್ಪ ಆಗಮಿಸುವರು. ಅನಂತರ ಲಿಂಗಾಯತ ಬಾಲಸಾಹಿತ್ಯ ರತ್ನಮಾಲೆಯ ಮೊದಲ ಕಿರುಹೊತ್ತಿಗೆ ಬಿಡುಗಡೆಗೊಳಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಲಿಂಬಯ್ಯಸ್ವಾಮಿ ಹಿರೇಮಠ, ಜಾತ್ರಾ ಕಮಿಟಿ ಅಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement