ಕಾಂಗ್ರೆಸ್ ಸಂಭ್ರಮಾಚರಣೆ
ಹುಬ್ಬಳ್ಳಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಸೋಮವಾರ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಉಣಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಭಾನುವಾರ ಬೆಳಗ್ಗೆ ಸಂಭ್ರಮ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಕಾಡಯ್ಯ ಹಿರೇಮಠ, ಸಿದ್ದರಾಮಯ್ಯ ನೇತೃತ್ವದ ಆಡಳಿತದಲ್ಲಿ ನಾಡಿನ ಜನರಿಗೆ ಸರ್ಕಾರದ ಎಲ್ಲ ರೀತಿಯ ಸೌಲಭ್ಯಗಳು ದೊರಕುವುದರೊಂದಿಗೆ ನೆಮ್ಮದಿಯ ಜೀವನ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೀರಾಜಿ ಖಂಡೇಕಾರ, ಬಸವಣ್ಣೆಪ್ಪ ಮೆಣಸಿನಕಾಯಿ, ಪ್ರಕಾಶ ಕುರಹಟ್ಟಿ, ಸಿದ್ದಪ್ಪ ಹೆಬಸೂರು, ಹನುಮಂತ ಹಣಗಿ, ವೀರಭದ್ರಪ್ಪ ಬೆಂಗೇರಿ, ದ್ಯಾಮಣ್ಣ ಚವಡಿ, ಫಕೀರಪ್ಪ ತಟ್ಟಿಮನಿ, ಬಾಬಾಜಾನ ಖಾಜಿ, ಬಸವರಾಜ ಸಂಕಣ್ಣವರ, ವೆಂಕಪ್ಪ ದಂಡಪ್ಪನವರ, ಜಂಪನಗೌಡ ಸೋಮನಗೌಡ್ರ, ಸುರೇಶ ಬೆಳದಡಿ, ತಿಮ್ಮಣ್ಣ ಬಾರ್ಕಿ, ಸರಿತಮ್ಮಪ್ಪ ಕಠಾರೆ ಸೇರಿದಂತೆ ಕೇಶ್ವಾಪುರ, ನಾಗಶೆಟ್ಟಿಕೊಪ್ಪ, ಬೆಂಗೇರಿ, ಗೋಪನಕೊಪ್ಪ ಮತ್ತಿತರರ ಬಡಾವಣೆಗಳ ಹಿರಿಯರು ಪಾಲ್ಗೊಂಡಿದ್ದರು.
ಶಿವಾಜಿ ಜಯಂತಿ
ಕಲಘಟಗಿ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾನುವಾರ ಛತ್ರಪತಿ ಶಿವಾಜಿ ಮಹಾರಾಜರ 386ನೇ ಜಯಂತ್ಯುತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ತಾಲೂಕು ಕ್ಷತ್ರೀಯ ಸಮಾಜದ ಅಧ್ಯಕ್ಷ ಪಾಂಡುರಂಗ ರಾಮಜಿ, ಶಂಕರಗಿರಿ ಬಾವನವರ, ಎಸ್.ಎಸ್. ಸಾವುಕಾರ, ಪರಶುರಾಮ ಬಾಬ್ರಿ, ನಿಂಗಪ್ಪ ಖಾನೋಜಿ, ಬಾಬು ಅಂಚಟಗೇರಿ, ಮಹಾದೇವಪ್ಪ ತಹಸೀಲ್ದಾರ್, ರಾಮಣ್ಣ ಮೋತೆನ್ನವರ, ಯಲ್ಲಪ್ಪ ನಾಳಕರ, ಸಾವಿತ್ರಿ ಹುಲಿಹೊಂಡ, ಸದಾನಂದ ಚಿಂತಾಮಣಿ, ಯಲ್ಲಾರಿ ಶಿಂಧೆ, ಫಕ್ಕೀರೇಶ ನೆಸರೇಕರ, ಬಾಬು ವಂಡಕರ ಸೇರಿದಂಚೆ ಹಲವರು ಪಾಲ್ಗೊಂಡಿದ್ದರು.