ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ: ಬೇಸಿಗೆ ಶಿಬಿರ ಸಮಾಪ್ತಿ

Vishwanath S
Updated On : 13 May 2013, 11:31 am

ಧಾರವಾಡ:  ಇಲ್ಲಿನ ಕಲಾನಿಧಿ ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆ ಏರ್ಪಡಿಸಿದ್ದ 15 ದಿನಗಳ ಮಕ್ಕಳ ಬೇಸಿಗೆ ಶಿಬಿರದಲ್ಲಿ ಭಾನುವಾರ ವಿಶ್ವ ತಾಯಂದಿರ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.
ಇಲ್ಲಿನ ರಂಗಾಯಣದ ಸಭಾಂಗಣದಲ್ಲಿ ಶಿಬಿರದ ಮಕ್ಕಳು ತಮ್ಮ ತಾಯಂದಿರ ಕಾಲು ತೊಳೆದು ಪೂಜೆ ಮಾಡಿ ಸಿಹಿ ತಿನ್ನಿಸಿ ಗೌರವ ಸೂಚಿಸುವ ಮೂಲಕ ತಾಯಂದಿರ ದಿನ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ ಮಾಶಾಳ, ಭಾರತೀಯ ಅದರಲ್ಲಿಯೂ ರಾಜ್ಯದ ಮಕ್ಕಳು ಅತ್ಯಂತ ಕ್ರಿಯಾಶೀಲರು. ಅವರಿಗೆ ಮಾರ್ಗದರ್ಶನ ಬೇಕಷ್ಟೇ. ಅದನ್ನು ಶಿಕ್ಷಕರು ಅಥವಾ ಬೇಸಿಗೆ ಶಿಬಿರದಲ್ಲಿ ಕೊಡಬೇಕು. ಅಲ್ಲದೆ, ಪಾಲಕರು ಮಕ್ಕಳಿಗೆ ಉತ್ತಮ ನೈತಿಕ ಶಿಕ್ಷಣ ನೀಡಬೇಕೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಲಾನಿಧಿ ಸಂಸ್ಥೆಯ ಮುಖ್ಯಸ್ಥ ಗೋವಿಂದ ಇಂಚೂರ, ಕಳೆದ ಎಂಟು ವರ್ಷದಿಂದ ಈ ಶಿಬಿರ ಹಮ್ಮಿಕೊಳ್ಳುತ್ತಿದ್ದು ಮಕ್ಕಳಿಗೆ ನಾನಾ ರೀತಿಯ ಚಟುವಟಿಕೆಗಳ ಮೂಲಕ ಅವರನ್ನು ಸಾಮಾಜಿಕವಾಗಿ ಬೆಳೆಸಲು ಪ್ರಯತ್ನಿಸಲಾಗುತ್ತಿದೆ. ಅಲ್ಲದೆ, ಸಾಂಪ್ರದಾಯಿಕ ಆಚರಣೆಗಳನ್ನು ಈ ಸಂದರ್ಭದಲ್ಲಿ ಆಚರಿಸುವುದರಿಂದ ಮಕ್ಕಳಿಗೆ ತಮ್ಮ ಸಂಪ್ರದಾಯದ ಅರಿವಾಗುತ್ತದೆ ಎಂದು ಹೇಳಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ, ಸಂಗೀತ, ಫ್ಯಾಶನ್ ಷೋ ಕಾರ್ಯಕ್ರಮ ನಡೆಯಿತು. ಮಾರುತಿ ಸನದಿ ಸ್ವಾಗತಿಸಿದರು. ಗುರುಪ್ರಸಾದ ಹೆಗಡೆ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement