ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಸವಣ್ಣನವರ ವಿಚಾರಗಳು ಮಾರ್ಗದರ್ಶಿ

Vishwanath S
Updated On : 13 May 2013, 11:31 am

ಧಾರವಾಡ:  ಸಕಲ ಜೀವಾತ್ಮರಿಗೆ ಲೇಸು ಬಯಸಿದ ವಿಶ್ವದ ಪ್ರಥಮ ದಾರ್ಶನಿಕ ವಿಶ್ವಗುರು ಬಸವಣ್ಣನವರ ವಿಚಾರಗಳು ಇಂದಿಗೂ ನಮ್ಮ ಜೀವನಕ್ಕೆ ಮಾರ್ಗದರ್ಶಿ ಎಂದು ಕಲಾವಿದ, ಪ್ರಾಧ್ಯಾಪಕ ಡಾ. ಶ್ರೀಶೈಲ ಹುದ್ದಾರ ಅಭಿಪ್ರಾಯಿಸಿದರು.
ಬಸವ ಜಯಂತಿ ಉತ್ಸವ ಸಮಿತಿ ಹಾಗೂ ಬಸವಕೇಂದ್ರ ಜಂಟಿಯಾಗಿ ಪಂ. ರಾಜಗುರು ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಕೂಡಲ ಸಂಗಮ ದೃಶ್ಯ ರೂಪಕ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಬಸವಣ್ಣನವರ ತತ್ವಗಳ ಹೆಸರಿನಲ್ಲಿ ಹತ್ತು ಹಲವು ಸಂಘಟನೆಗಳಾಗಿದ್ದು, ಆ ತತ್ವಗಳ ಹಿಂದಿನ ಆಶಯ ಒಂದೇ ಆಗಿದೆ. ಬಸವ ತತ್ವ ಪ್ರಸಾರಕರು ಒಂದಾಗಿ ಬಸವ ತತ್ವವನ್ನು ಜನಮನಕ್ಕೆ ಮುಟ್ಟಿಸುವ ವಿಶೇಷವಾಗಿ ಯುವ ಜನಾಂಗಕ್ಕೆ ತತ್ವಗಳ ಮೌಲ್ಯ ಮನದಟ್ಟು ಮಾಡುವ ಕಾರ್ಯವಾಗಬೇಕು. ಇದು ಬೋಧನೆಯ ತತ್ವ ಅಲ್ಲ ಸಾಧಿಸಿದವರ ಅನುಭಾವದ ತತ್ವ ಎಂದರು.
ಬಸವಕೆಂದ್ರ ಅಧ್ಯಕ್ಷ ರಾಜು ಮರಳಪ್ಪನವರ ಮತ್ತು ಅಕ್ಕನ ಬಳಗದ ಅಧ್ಯಕ್ಷರಾದ ಪ್ರಭಾವತಿ ಮೂರಶಿಳ್ಳಿ, ನಿರಂತರ ಪೌಂಡೇಶನ ಸಂಚಾಲಕ ದೀಪಕ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ದೆಹಲಿಯ ಚನ್ನಬಸವನಾಂದ ಸ್ವಾಮೀಜಿ ಮಾತನಾಡಿ, ಶರಣತತ್ವ ಇಂದು ಜಾಗತಿಕ ಗಮನ ಸೆಳೆದಿದೆ. ವಿಶ್ವದ ಎಲ್ಲೆಡೆ ಬಸವ ತತ್ವ ಪ್ರಸಾರ ಮಾಡುವ ಕಾರ್ಯ ನಡೆದಿದೆ. ಮಹಾತ್ಮ ಗಾಂಧಿಜೀಯವರು ಬಸವಣ್ಣನವರ ಕುರಿತು ಅರಿತವರಾಗಿದ್ದರು ಎಂದರು.
ಡಾ. ಶಂಭು ಹೆಗಡಾಳ ಸ್ವಾಗತಿಸಿದರು. ಉಮೇಶ ಕಟಗಿ, ಸಿದ್ರಾಮಣ್ಣ ನಡಕಟ್ಟಿ, ಬಸವರಾಜ ಮ್ಯಾಗೇರಿ, ಬಸವಂತ ತೋಟದ, ಕೋರಿಶೆಟ್ಟರ್, ಶಿವಕುಮಾರ ಕಟಗಿ, ಎಸ್.ಆರ್. ರಾಚಣ್ಣವರ, ಶಿವಣ್ಣ ಶರಣನವರ, ಶಿವಣ್ಣ ಬಿರಾದಾರ ಇದ್ದರು. ಮೈಸೂರಿನ ನಿರಂತರ ಫೌಂಡೇಶನ್ ವತಿಯಿಂದ ಕೂಡಲ ಸಂಗಮ ದೃಶ್ಯ ರೂಪಕ ಪ್ರದರ್ಶನ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement