ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಎಸ್ಸೆಸ್ಸೆಲ್ಸಿ: ಅಮ್ಮಿನಬಾವಿ ಶ್ರೀಶಾಂತೇಶ್ವರಪ್ರೌಢಶಾಲೆಗೆ ಶೇ. 96.74 ಫಲಿತಾಂಶ

Mainashree
Updated On : 15 May 2013, 10:52 am

ಧಾರವಾಡ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀಶಾಂತೇಶ್ವರ ಪ್ರೌಢ ಶಾಲೆ ಶೇ. 96.74ರಷ್ಟು ಫಲಿತಾಂಶ ಮಾಡಿದೆ. ಪರೀಕ್ಷೆಗೆ ಹಾಜರಾಗಿದ್ದ 123 ವಿದ್ಯಾರ್ಥಿಗಳ ಪೈಕಿ ನಾಲ್ವರು ಡಿಸ್ಟಿಂಗಷನ್, 37  ಪ್ರಥಮ ದರ್ಜೆ, 30 ದ್ವಿತೀಯ ದರ್ಜೆ ಹಾಗೂ 48 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಮಲಂಗ ಮಾಸೀಮ ಮಕಾನದಾರ ಶೇ. 89.12ರಷ್ಟು ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅಣ್ಣಯ್ಯ ಸೂರ್ಯವಂಶಿ ಶೇ. 82.27, ಶ್ರೀಕಾಂತ ಶೇ. 80.48 ಹಾಗೂ ಗೂಳೇಶಿ ಶೆಟ್ಟೆಪ್ಪನವರ ಶೇ. 80ರಷ್ಟು ಫಲಿತಾಂಶ ಗಳಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಆಶೀರ್ವದಿಸಿದ್ದಾರೆಂದು ಮುಖ್ಯೋಧ್ಯಾಪಕ ಎಸ್.ವೈ. ಪೂಜಾರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement