ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಒಡಿಶಾ ಮೂಲದ ಬಾಲಕಿ ಮೇಲೆ ಅತ್ಯಾಚಾರ: 3 ತಿಂಗಳು ಗರ್ಭಿಣಿ

Vishwanath S
Updated On : 14 May 2013, 9:06 am

ಕ.ಪ್ರ. ವಾರ್ತೆ ,  ಧಾರವಾಡ ,  ಮೇ 14
14 ವವರ್ಷದ ಬಾಲಕಿಯ ಮೇಲೆ ಸತತ ಅತ್ಯಾಚಾರವೆಸಗಿದ ಪ್ರಕರಣ ಧಾರವಾಡ ತಾಲೂಕಿನ ಬೇಲೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೊಳಗಾದ ಬಾಲಕಿ ಒಡಿಶಾ ಮೂಲದವಳು. ಅವಳೀಗ ಮೂರು ತಿಂಗಳು ಗರ್ಭಿಣಿಯಾಗಿದ್ದಾಳೆ.
ಬೇಲೂರಿನ ಹನುಮಂತ ಮಾದರ (30) ಎಂಬಾತ ಏಳು ತಿಂಗಳಿಂದ 14 ವಯಸ್ಸಿನ ಒಡಿಶಾ ಮೂಲದ ಬಾಲಕಿ ಸುಶ್ಮಿತಾ (ಹೆಸರು ಬದಲಾಯಿಸಲಾಗಿದೆ)ಳ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈ ಬಾಲಕಿಗೆ ತಾಯಿ ಮಾತ್ರ ಇದ್ದು, ತಂದೆ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆ ಒಡಿಶಾದಿಂದ ಕೆಲಸ ಅರಸಿಕೊಂಡು ಇಲ್ಲಿನ ಬೇಲೂರು ಕೈಗಾರಿಕಾ ಪ್ರದೇಶಕ್ಕೆ ಬಂದು, ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ನಿತ್ಯ ಬಾಲಕಿ ತಾಯಿ ಕೆಲಸಕ್ಕೆ ಹೋಗುತ್ತಿದ್ದರಿಂದ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಹಾಗೂ ಇನ್ನೆರಡು ಚಿಕ್ಕಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು.
ಇಬ್ಬರು ಚಿಕ್ಕ ಮಕ್ಕಳಿಗೆ ಚಾಕಲೇಟ್ ತರಲು ಹಣ ಕೊಟ್ಟು ಅಂಗಡಿಗೆ ಕಳುಹಿಸಿ ಆರೋಪಿ ಪಕ್ಕದ ಮನೆಯ ಹನುಮಂತ, ಬಾಲಕಿಯೊಂದಿಗೆ ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳುತ್ತಿದ್ದ. ಅಲ್ಲದೇ, ವಿವಿಧ ಆಮಿಷವೊಡ್ಡಿ
ಬೈಕ್ ಮೇಲೆ ಅನೇಕ ಬಾರಿ ಹೊಲದ ಕಡೆಗೆ ಕರೆದುಕೊಂಡು ಹೋಗುತ್ತಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ನಿರಂತರವಾಗಿ ಅತ್ಯಾಚಾರ ಎಸಗಿದ್ದರಿಂದ ಬಾಲಕಿ ಈಗ ಮೂರು ತಿಂಗಳು ಗರ್ಭಿಣಿಯಾಗಿದ್ದು, ಅತ್ಯಾಚಾರ ಎಸಗಿದ ಕುರಿತ ಮಾಹಿತಿ ಮಂಗಳವಾರ ಗ್ರಾಮಸ್ಥರಿಗೆ ಗೊತ್ತಾಗಿದೆ. ವಿಷಯ ತಿಳಿದ ಗ್ರಾಮದ ಮಹಿಳೆಯೊಬ್ಬರು ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಹಾಗೂ ಕಿಡ್ಸ್ ಸಂಸ್ಥೆಗೆ ಸುದ್ದಿ ಮುಟ್ಟಿಸಿದ್ದಾರೆ. ಮೂರು ಸಂಸ್ಥೆಯ ಪದಾಧಿಕಾರಿಗಳು ತಕ್ಷಣ ಬಾಲಕಿ ಮನೆಗೆ ಹೋಗಿ ನಡೆದ ವೃತ್ತಾಂತವನ್ನೆಲ್ಲಾ ತಿಳಿದು ಗರಗ ಪೊಲೀಸ್ ಠಾಣೆಯಲ್ಲಿ ಹನುಮಂತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಹನುಮತ ಈಗ ನಾಪತ್ತೆಯಾಗಿದ್ದಾನೆ. ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಹನುಮಂತನಿಗೆ ಮದುವೆಯಾಗಿದ್ದು, ಮೂರು ಮಕ್ಕಳಿದ್ದಾರೆ. ಇಷ್ಟಾಗಿಯೂ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು ಗ್ರಾಮಸ್ಥರಲ್ಲಿ ತೀವ್ರ ಮುಜುಗರ ಉಂಟುಮಾಡಿದೆ.
ಎರಡ್ಮೂರು ತಿಂಗಳ ಹಿಂದೆಯೇ ತಾಲೂಕಿನ ಅಮ್ಮಿನಬಾವಿ ಹಾಗೂ ಚಿಕ್ಕಮಲ್ಲಿಗವಾಡ ಗ್ರಾಮದ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ನಡೆದ ಪ್ರಕರಣವನ್ನು ಪ್ರಸ್ತುತ ಸ್ಮರಿಸಿಕೊಳ್ಳಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement