ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನೀರಿನ ಟ್ಯಾಂಕಿನಲ್ಲಿ ಬಿದ್ದು 18 ತಿಂಗಳ ಮಗು ಸಾವು

Mainashree
Updated On : 15 May 2013, 10:51 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 14
ಮನೆಯ ಹಿಂಬದಿಯ ನೀರಿನ ತೊಟ್ಟಿಯಲ್ಲಿ ಒಂದೂವರೆ ವರ್ಷದ ಮಗು ಬಿದ್ದು ಸಾವನ್ನಪ್ಪಿದ ಘಟನೆ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮೃತಪಟ್ಟ ಮಗುವನ್ನು ಶ್ರೀಶೈಲ್ ಎಂದು ಗುರುತಿಸಲಾಗಿದೆ.  ಮೇ 13ರಂದು ಸಂಜೆ 6.30ರ ಸುಮಾರಿಗೆ ತಿರಕಪ್ಪ ಮುದಗಿರಿ ಎಂಬುವರ ಮನೆ ಹಿಂದೆ ಆಟವಾಡುತ್ತಿದ್ದ ಶ್ರೀಶೈಲ್, ಏಕಾಏಕಿ ನೀರಿನ ಟ್ಯಾಂಕ್‌ನಲ್ಲಿ ಬಿದ್ದು ತೀವ್ರ ಅಸ್ವಸ್ತಗೊಂಡಿದ್ದ. ಇದನ್ನು ಗಮನಿಸಿದ ಅಕ್ಕಪಕ್ಕದ ಜನತೆ ತಕ್ಷಣ ಮಗವನ್ನು ಮೇಲಕ್ಕೆತ್ತಿ ಉಪಚಾರಕ್ಕಾಗಿ ಆಸ್ಪತ್ರಗೆ ಸಾಗಿಸಿದರಾದರೂ ಆತ ಬದುಕಿ ಉಳಿದಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಕುರಿತಂತೆ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement