ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಿದ್ಧಲಿಂಗೇಶ್ವರ ಜಾತ್ರೆ

Lingaraj Badiger
Updated On : 16 May 2013, 11:57 am

ನವಲಗುಂದ:  ಇಲ್ಲಿಯ ಗವಿಮಠದಲ್ಲಿ ಏರ್ಪಡಿಸಿರುವ ಶ್ರೀ ಸಿದ್ಧೇಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಮೇ 16ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 4.30ಕ್ಕೆ ಸಿದ್ಧಲಿಂಗೇಶ್ವರ ಮಹಾರಥೋತ್ವವ ಹಾಗೂ ಸಂಜೆ 7ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಮಠಾಧೀಶರು, ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸದ್ಬಕ್ತರು ಪಾಲ್ಗೊಂಡು ಸಿದ್ಧಲಿಂಗೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಜಾತ್ರಾ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಸ್ವರ್ಣ ಪ್ರಾಶನ
ಹುಬ್ಬಳ್ಳಿ: ನಗರದ ಸಿಬಿಟಿ ಬಳಿಯ ಅನುಗ್ರಹ ಆಯುರ್ವೇದ ಆಸ್ಪತ್ರೆಯಲ್ಲಿ ಮೇ 16ರಂದು ಮಕ್ಕಳಿಗೆ ಸ್ವರ್ಣ ಪ್ರಾಶನ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10ರಿಂದ ರಾತ್ರಿ 8ರ ವರೆಗೆ 3 ತಿಂಗಳಿನಿಂದ 7 ವರ್ಷದೊಳಗಿನ ಮಕ್ಕಳಿಗೆ ಸ್ವರ್ಣ ಪ್ರಾಶನ ಮಾಡಲಾಗುವುದು. ಮಾಹಿತಿಗೆ ಮೊ: 9739865460 ಅಥವಾ 9743131200 ಸಂಪರ್ಕಿಸಲು ಕೋರಲಾಗಿದೆ.

ಖೊಟ್ಟಿ ದಾಖಲೆ:
ಪ್ರಕರಣ ದಾಖಲು
ಹುಬ್ಬಳ್ಳಿ:   ಬ್ಯಾಂಕಿಗೆ ಖೊಟ್ಟಿ ದಾಖಲೆಗಳನ್ನು ನೀಡಿ ವ್ಯಕ್ತಿಯೊಬ್ಬ ವಂಚಿಸಿರುವ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಲ್ಲಾಪುರ ಓಣಿ ನಿವಾಸಿ ಬಸಯ್ಯ ಶಂಕ್ರಯ್ಯ ಇನಾಪುರಮಠ ಎಂಬುವನೇ ವಂಚಿಸಿರುವ ಆರೋಪಿ. ಕೊಪ್ಪಿಕರ ರಸ್ತೆಯ ಕೆನರಾ ಬ್ಯಾಂಕ್‌ನಿಂದ ಟಿಎಂಇಡಿಪಿ ಯೋಜನೆಯಡಿಯಲ್ಲಿ ಸಾಲ ಪಡೆಯುವಾಗ ಆರೋಪಿ ಇನಾಪುರಮಠ, ಬ್ಯಾಂಕಿಗೆ ಖೊಟ್ಟಿ ದಾಖಲೆಗಳನ್ನು ನೀಡಿದ್ದ. ಅಲ್ಲದೇ, ಸಾಲದ ಹಣಕ್ಕೆ ಭದ್ರತೆಗಾಗಿ ಇಡಲಾಗಿದ್ದ ಹೊಲಿಗೆ ಯಂತ್ರಗಳನ್ನು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಯದಂತೆ ಮಾರಾಟ ಮಾಡಿದ್ದಾನೆ ಎಂದು ಠಾಣೆಯಲ್ಲಿ ನೀಡಲಾಗಿರುವ ದೂರಿನಲ್ಲಿ ಬ್ಯಾಂಕ್ ಅಧಿಕಾರಿ ಅಂಕೋಲೆಕರ ತಿಳಿಸಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಾಗಿದೆ.


ಸರ ದೋಚಿದ ಕಳ್ಳರು
ಹುಬ್ಬಳ್ಳಿ:  ದೇವಸ್ಥಾನದಿಂದ ಮನೆಗೆ ತೆರಳುತ್ತಿದ್ದ ಮಹಿಳೆಯೊಬ್ಬಳ ಕೊರಳಲ್ಲಿದ್ದ 2 ತೊಲೆ ಚಿನ್ನದ ಸರವನ್ನು ಅಪರಿಚಿತರು ಕಿತ್ತುಕೊಂಡು ಪರಾರಿಯಾದ ಘಟನೆ ಹಳೇಹುಬ್ಬಳ್ಳಿಯ ಶ್ರೀನಗರದಲ್ಲಿ ನಡೆದಿದೆ. ಸೀತಾಬಾಯಿ ಜಯರಾಮ್ ಭಟ್ (55) ಎಂಬುವರೇ ಚಿನ್ನದ ಸರ ಕಳೆದುಕೊಂಡ ಮಹಿಳೆ. ಮಂಗಳವಾರ ಸಂಜೆ ಹಳೇಹುಬ್ಬಳ್ಳಿ ಪ್ರದೇಶದ ಸೋಮೇಶ್ವರ ದೇವಾಲಯಕ್ಕೆ ತೆರಳಿ ದರ್ಶನ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಾಲ್ನಡಿಗೆಯಲ್ಲಿ ಹೊರಟಿದ್ದ ಸೀತಾಬಾಯಿ ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ಬೈಕ್ ಮೇಲೆ ಬಂದ ಆಗುಂತಕರಿಬ್ಬರು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತಂತೆ ಹಳೇಹುಬ್ಬಳ್ಳಿ ಠಾಣೆ ಇನ್‌ಸ್ಪೆಕ್ಟರ್ ಸಚಿನ್ ಚಲವಾದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement