ಪಿಯುಸಿ ಫಲಿತಾಂಶ: ಕೆ.ಇ. ಬೋಡ್ಸ್ ಕಾಲೇಜು ಸಾಧನೆ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 17
ಇಲ್ಲಿಯ ಮಾಳಮಡ್ಡಿಯ ಕೆ.ಇ. ಬೋಡ್ಸ್ ಪಪೂ ಕಾಲೇಜು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ. 88.88 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾಗಿದ್ದ 135 ವಿದ್ಯಾರ್ಥಿಗಳಲ್ಲಿ 120 ವಿದ್ಯಾರ್ಥಿಗಳು ಪಾಸಾಗಿದ್ದು, ಈ ಪೈಕಿ ಆರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 74 ವಿದ್ಯಾರ್ಥಿಗಳು ಪ್ರಥಮ, 21 ವಿದ್ಯಾರ್ಥಿಗಳು ದ್ವಿತೀಯ ಹಾಗೂ 19 ವಿದ್ಯಾರ್ಥಿಗಳು ತೃತೀಯ ವರ್ಗದಲ್ಲಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದ ನೀಲಪ್ಪ ಹರಿಜನ ವಾಣಿಜ್ಯ ವಿಭಾಗದಲ್ಲಿ ಒಟ್ಟು 600 ಅಂಕಗಳಿಗೆ 546 ಅಂಕ ಗಳಿಸಿ ಶೇ. 91ರಷ್ಟು ಸಾಧನೆ ಮಾಡಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಕಲಾ ವಿಭಾಗದ ರೇಣುಕಾ ಲಮಾಣಿ 541 ಅಂಕ ಗಳಿಸಿ ಶೇ. 90.16ರ ಸಾಧನೆಯೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. 540 ಅಂಕ ಗಳಿಸಿರುವ ವಾಣಿಜ್ಯ ವಿಭಾಗದ ಗಾಯತ್ರಿ ಜೋಶಿ ಕಾಲೇಜಿಗೆ ತೃತೀಯ ಸ್ಥಾನ ಸಂಪಾದಿಸಿದರೆ ಕಲಾ ವಿಭಾಗದ ಮಾರುತಿ ಎಣ್ಣಿ ಶೇ. 89ರಷ್ಟು ಸಾಧನೆ ಮಾಡಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ಅತ್ತ್ಯುತ್ತಮ ಸಾಧನೆಯನ್ನು ಕೆ.ಇ. ಬೋರ್ಡ್ನ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ, ಕಾರ್ಯದರ್ಶಿ ಅರುಣ ನಾಡಿಗೇರ, ಆಡಳಿತ ಮಂಡಳಿ ಅಧ್ಯಕ್ಷರುಗಳಾದ ಡಾ. ಎಸ್.ಎಚ್. ನೆಗಳೂರ, ಎಸ್.ಎನ್. ಪರಾಂಡೆ, ಮಹಾವಿದ್ಯಾಲಯದ ಪ್ರಾಂಶುಪಾಲ ವಸಂತ ಮುಡೇಶ್ವರ ಅಭಿನಂದನೆ ಸಲ್ಲಿಸಿದ್ದಾರೆ.