ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುದ್ದಿ ಸಂಕ್ಷೇಪ

Mainashree
Updated On : 18 May 2013, 10:56 am

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ ನಾಳೆ
ಧಾರವಾಡ: ಅವನಿ ರಸಿಕ ರಂಗ ವೇದಿಕೆಯು ನಗರದ ನಾಯಣಪುರದ ಅವನಿ ಸಭಾಂಗಣದಲ್ಲಿ ಮೇ. 19ರಂದು ಸಂಜೆ 5.30ಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿ ಹಮ್ಮಿಕೊಂಡಿದೆ. ಗಾಯಕ ನರಸಿಂಹ ಜೋಶಿ ಸಂಗೀತ ಕಚೇರಿ ನಡೆಸಲಿದ್ದಾರೆ. ಜೋಶಿ ಪಂಡಿತ ಶ್ರೀಪಾದ ಹೆಗಡೆ ಕಂಪ್ಲಿಯವರ ಶಿಷ್ಯರಾಗಿದ್ದು, ಪ್ರತಿಷ್ಠಿತ ಸಂಗೀತೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಈ ಸಂಗೀತ ಕಾರ್ಯಕ್ರಮದಲ್ಲಿ ಉದಯ ಕುಲಕರ್ಣಿ ತಬಲಾ ಸಾಥ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪಾಂಡೇಶ್ವರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಧಾರವಾಡ: ಅವನಿ ರಸಿಕ ರಂಗ ವೇದಿಕೆ ಹಾಗೂ ಜಿ.ಆರ್. ಪಾಂಡೇಶ್ವರ ಪ್ರತಿಷ್ಠಾನದ ವತಿಯಿಂದ ಇಲ್ಲಿನ ಕವಿವಿ ಪತ್ರಿಕೋದ್ಯಮ ಅಧ್ಯಯನ ವಿಭಾಗದಲ್ಲಿ ಮೇ 20ರಂದು ಬೆಳಿಗ್ಗೆ 11ಕ್ಕೆ ಜಿ.ಆರ್. ಪಾಂಡೇಶ್ವರ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಸಮಾರಂಭದಲ್ಲಿ ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಆಂದೋಲನ ದಿನಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಎನ್.ಪಿ. ಭಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಂಗ ಶಿಕ್ಷಣ ಡಿಪ್ಲೋಮಾ ಕೋರ್ಸ್: ಅರ್ಜಿ ಆಹ್ವಾನ
ಧಾರವಾಡ: ಮೈಸೂರು ರಂಗಾಯಣ 3 ವರ್ಷಗಳಿಂದ ಆರಂಭಿಸಿದ ರಂಗ ಶಿಕ್ಷಣದಲ್ಲಿ ಡಿಪ್ಲೋಮಾ ಕೋರ್ಸಿಗೆ ದ್ವಿತೀಯ ಪಿಯುಸಿ ಪಾಸಾದವರಿಂದ ಅರ್ಜಿ ಆಹ್ವಾನಿಸಿದೆ. 18ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಮೇ 30ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ 0821-2512639 ಹಾಗೂ 94483 22815 ಸಂಪರ್ಕಿಸಬಹುದೆಂದು ರಂಗಾಯಣ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆಲೋಶಿಪ್‌ಗೆ ಆಹ್ವಾನ
ಹುಬ್ಬಳ್ಳಿ: ನಗರದ ದೇಶಪಾಂಡೆ ಎಜುಕೇಶನಲ್ ಟ್ರಸ್ಟ್ 2013-14ನೇ ಸಾಲಿನ ವಿವಿಧ ಫೆಲೋಶಿಪ್‌ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ, ಪಿಯುಸಿ, ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರೈಸಿರಬೇಕು. 18ರಿಂದ 30 ವರ್ಷದವರಾಗಿರಬೇಕು. ಆಸಕ್ತರು ಜೂ. 8ರೊಳಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ಗುರನಗೌಡ ಕೆ., ಪ್ರೋಗ್ರಾಮ್ ಮ್ಯಾನೇಜರ್, ದೇಶಪಾಂಡೆ ಎಜುಕೇಶನಲ್ ಟ್ರಸ್ಟ್, ಡಿಸಿಎಸಿಇ ಬಿಲ್ಡಿಂಗ್, ಬಿವಿಬಿ ಕಾಲೇಜ್ ಆವರಣ, ವಿದ್ಯಾನಗರ, ಹುಬ್ಬಳ್ಳಿ-580031 (ಮೊ.ಸಂ.-7760965494 ಅಥವಾ 7760965491) ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement