ಜೈನ ಸಮಾಜಕ್ಕೆ ಸಚಿವ ಸ್ಥಾನ ನೀಡಲು ಒತ್ತಾಯ
ಕುಂದಗೋಳ: ರಾಜ್ಯದಲ್ಲಿ ಜೈನ ಸಮಾಜವೂ ಪರಿಗಣಿಸುವ ಒಂದು ಸಮುದಾಯವಾಗಿದ್ದು, ಜೈನ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ತಾಲೂಕಿನ ಗುಡೇನಕಟ್ಟಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಬಿಜೆಪಿ ಸರ್ಕಾರವನ್ನು ಹೊರತುಪಡಿಸಿದರೆ, ಹಿಂದಿನ ಯಾವ ಸರ್ಕಾರಗಳೂ ಜೈನ ಸಮುದಾಯಕ್ಕೆ ಸಚಿವ ಸ್ಥಾನವನ್ನು ನೀಡಿಲ್ಲ. ಈ ಬಾರಿಯಾದರೂ ಜೈನರಿಗೆ ಸಚಿವ ಸ್ಥಾನ ಕೊಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಲಾಗುವುದು ಎಂದು ಗ್ರಾಮದ ಶಿವಪ್ಪ ಯೋಗಪ್ಪನವರ, ಬಸವರಾಜ ಯೋಗಪ್ಪನವರ, ದೇವಪ್ಪ ಮಲ್ಲಿಗವಾಡ, ಮುತ್ತನ ಯೋಗಪ್ಪನವರ, ಧನಪಾಲ ಮಲ್ಲಿಗವಾಡ. ಭರತೇಶ ಯೋಗಪ್ಪನವರ ಒತ್ತಾಯಿಸಿದ್ದಾರೆ.
ಹರಭಟ್ಟ ಪಿಯು ಕಾಲೇಜಿಗೆ ಶೇ. 70 ಫಲಿತಾಂಶ
ಕುಂದಗೋಳ: ಪಟ್ಟಣದ ಹರಭಟ್ಟ ಪಿಯು ಕಾಲೇಜು ಪಿಯುಸಿ ಪರೀಕ್ಷೆಯಲ್ಲಿ ಶೇ.70.68 ಫಲಿತಾಂಶ ಪಡೆದಿದೆ. ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಸವಿತಾ ಅಂಗಡಿ ಶೇ. 84.33, ಸುಮಾ ಪಾಯಕ್ಕನವರ ಶೇ. 84.33 ಅಂಕ ಪಡೆದಿದ್ದಾರೆ. ಸುಜಾತಾ ಕುಂದಗೋಳ ಶೇ. 83.83, ಪ್ರವೀಣ ಹೂಗಾರ ಶೇ. 82.66 ಅಂಕ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಬಸವರಾಜ ಅಂಗಡಿ ಶೇ. 87.23, ಕುತುಭಗೌಡ ಪಾಟೀಲ ಶೇ.83.33, ಶೋಭಾ ಹೊಸಕೇರಿ ಶೇ. 81 ಅಂಕ ಪಡೆದಿದ್ದಾರೆ.
ವಿವೇಕಾನಂದ ಶಾಲೆ ಶೇ. 100ರಷ್ಟು ಸಾಧನೆ
ಕುಂದಗೋಳ: ಪಟ್ಟಣದ ವಿವೇಕಾನಂದ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆದಿದ್ದಾರೆ. ಚನ್ನಮ್ಮ ಕಟಗಿ ಶೇ. 90.88 ರಷ್ಟು ಅಂಕಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮೇಘಾ ಹಂದ್ರಾಳ ಶೇ. 88.96 ದ್ವಿತೀಯ ಹಾಗೂ ರೋಹಿತ ಕಂಕಣ್ಣವರ ಶೇ. 87.20ರಷ್ಟು ಅಂಕ ಪಡೆದು ತೃತಿಯ ಸ್ಥಾನ ಪಡೆದಿದ್ದಾರೆ.
ಇಂದು ಸಾಮೂಹಿಕ ವಿವಾಹ ಕಾರ್ಯಕ್ರಮ
ಹುಬ್ಬಳ್ಳಿ: ಪಿಂಜಾರ ಓಣಿಯ ಹಜರತ್ ಸಯ್ಯದ್ ಮಲಿಕ ರೆಹಾನ್ ಯುಂಗ್ ಕಮಿಟಿಯಿಂದ ಮೇ 19ರ ಬೆಳಗ್ಗೆ 11.15 ಗಂಟೆಗೆ ಸಾಮೂಹಿಕ ವಿವಾಹವನ್ನು ಮೆಹಬೂಬಷಾ ಖಾದ್ರಿ ದರ್ಗಾ ಎದುರು ಹಮ್ಮಿಕೊಳ್ಳಲಾಗಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನೂತನ ವಧು-ವರರನ್ನು ಆಶೀರ್ವದಿಸಬೇಕೆಂದು ಕಮಿಟಿ ಕೋರಿದೆ.
ಪ್ರೊ. ವಿ.ಬಿ. ಹಿರೇಮಠಗೆ ಪಿಎಚ್‌ಡಿ ಪ್ರದಾನ
ಹುಬ್ಬಳ್ಳಿ: ನಗರದ ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಪ್ರೊ. ವಿ.ಬಿ. ಹಿರೇಮಠ ಸಲ್ಲಿಸಿದ್ದ ಪಿಎಚ್‌ಡಿ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. ಪ್ರೊ. ವಿ.ಬಿ. ಹಿರೇಮಠ ರಸಾಯನ ಶಾಸ್ತ್ರದಲ್ಲಿ 'ಸ್ಟ್ರಕ್ಚರ್ ಎಲ್ಯುಸಿಡೇಶನ್ ಆಫ್ ಅನ್‌ಯುಸುವಲ್ ಫ್ಯಾಟಿ ಆ್ಯಸಿಡ್ ಫ್ರಂ ಮೆಡಿಸಿನಲ್ ಪ್ಲ್ಯಾಂಟ್ಸ್ ಆ್ಯಂಡ್ ಸಿಂಥೆಟಿಕ್ ಆನ್ ಒಲಿಯೋಕೆವುಕಲ್ಸ್: ಆ್ಯನ್ ಅಪ್ರೋಚ್ ಟು ದಿ ಬಯೋಲಜಿಕಲ್ ಇವ್ಯಾಲ್ಯುಯೇಶನ್ ಆ್ಯಂಡ್ ಆಲ್ಸೊ ಬಯೋಫ್ಯೂಲ್ಸ್' ಕುರಿತು ಪ್ರಬಂಧ ಮಂಡಿಸಿದ್ದರು. ಕವಿವಿ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಎಂ.ಕೆ. ಹೊಸಮನಿ ಮಾರ್ಗದರ್ಶನ ಮಾಡಿದ್ದರು.