ನಾಳೆ ಎಸ್ಡಿಎಂ ಡಾಕ್ಟರ್
ಧಾರವಾಡ: ಆಕಾಶವಾಣಿ ನೇರ ಪ್ರಾಯೋಜಿತ ಎಸ್ಡಿಎಂ ಡಾಕ್ಟರ್ ಕಾರ್ಯಕ್ರಮದಲ್ಲಿ ಎಸ್ಡಿಎಂನ ಶರೀರ ರಚನಾ ಶಾಸ್ತ್ರ ವಿಭಾಗದ ಡಾ ವೀಣಾ ಕುಲಕರ್ಣಿ ಮೇ 21ರ ಸಂಜೆ 6.50ರಿಂದ 7.20ರ ವರೆಗೆ ಅಂಗಾಂಗ ದಾನ ವಿಷಯದ ಕುರಿತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಕೇಳುಗರು ದೂ. 0836 2233214, 2233215 ಅಥವಾ 2233216 ಸಂಪರ್ಕಿಸಬಹುದು.
ಬ್ಯಾಲಾಳ: ಕಲ್ಮೇಶ್ವರ ರಥೋತ್ಸವ ಇಂದು
ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದ ಶ್ರೀ ಕಲ್ಮೇಶ್ವರ ದೇವರ ರಥೋತ್ಸವ ಮೇ 20ರಂದು ಸಂಜೆ 5ಕ್ಕೆ ಜರುಗಲಿದೆ. ಈ ನಿಮಿತ್ತ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ರಥೋತ್ಸವ ದಿನ ಬೆಳಗ್ಗೆಯಿಂದಲೇ ಗ್ರಾಮದ ಚಿಕ್ಕಮಠ ಓಣಿಯ ಗಜಾನನ ಯುವಕ ಮಂಡಳಿಯ ಪದಾಧಿಕಾರಿಗಳಾದ ಸತೀಶ ಚಿಕ್ಕಮಠ, ಚೆನ್ನಯ್ಯ ಚಿಕ್ಕಮಠ ಅವರ ನೇತೃತ್ವದಲ್ಲಿ ಹೆಜ್ಜೆ ಮೇಳಗಳು ನಡೆಯಲಿವೆ. ಮೇ 21ರಂದು ರಾತ್ರಿ ಶ್ರೀ ಕಲ್ಮೇಶ್ವರ ದೇವರ ಕಡುಬಿನ ಕಾಳಗ ನಡೆಯಲಿದೆ ಎಂದು ಗ್ರಾಮದ ಬಸವರಾಜ ಹಿತ್ತಲಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವಲಗುಂದ: ನಾಳೆ ದಾಸವಾಣಿ ಕಾರ್ಯಕ್ರಮ
ಹುಬ್ಬಳ್ಳಿ: ಶ್ರೀ ಶಂಕರ ಜಯಂತಿ ಅಂಗವಾಗಿ ನಗರದ ಮನೋರೋಗ ತಜ್ಞ ಹಾಗೂ ಗಾಯಕ ಡಾ ವಿನೋದ ಕುಲಕರ್ಣಿ ಅವರು ನವಲಗುಂದದ ಶ್ರೀ ಶಂಕರ ಮಠದಲ್ಲಿ ಮೇ 21ರಂದು ಸಂಜೆ 6ಕ್ಕೆ ದಾಸವಾಣಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ನವಲಗುಂದದ ಶ್ರೀ ಶಂಕರ ಮಠದ ಪದಾಧಿಕಾರಿಗಳು ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಶಂಕರ ಪಾಟೀಲ ಅವರು ಹಾರ್ಮೋನಿಯಂ ಹಾಗೂ ನಾಗರಾಜ ಪಿಳ್ಳೆ ಅವರು ತಬಲಾ ಸಾಥ್ ನೀಡುವರು.
ರೇಲ್ವೆ ಬಳಕೆದಾರರ ಸಮಿತಿಗೆ ಶಿವು ಆಯ್ಕೆ
ಧಾರವಾಡ: ನೈಋತ್ಯ ರೇಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ಹು-ಧಾ ಮಹಾನಗರ ಪಾಲಿಕೆ ಸದಸ್ಯ ಶಿವು ಹಿರೇಮಠ ನೇಮಕವಾಗಿದ್ದಾರೆ. ನೈರುತ್ಯ ರೇಲ್ವೆ ಜನರಲ್ ಮ್ಯಾನೇಜರ್ ಇವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಪಾಲಿಕೆಗೆ 2ನೇ ಬಾರಿ ಸದಸ್ಯರಾಗಿ ಆಯ್ಕೆಯಾದ ಹಿರೇಮಠ, ಧಾರವಾಡ-ಬೆಂಗಳೂರು ಮಧ್ಯೆ ಸಂಚರಿಸುವ ಇಂಟರ್ ಸಿಟಿ ರೈಲು ಧಾರವಾಡದ ಜನರಿಗೆ ಅನುಕೂಲವಾಗುವ ಸಮಯದಲ್ಲಿ ಓಡಿಸುವುದು ಮತ್ತಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧಾರವಾಡದಿಂದ ಹುಬ್ಬಳ್ಳಿವರೆಗೆ ರೇಲ್ವೆ ಹಳಿಯುದ್ದಕ್ಕೂ ಪಾದಯಾತ್ರೆ ನಡೆಸಿದ್ದರು.
--