25ರಂದು ಬೆಳಗಾವಿಯಲ್ಲಿ ಕೌನ್ಸೆಲಿಂಗ್
ಧಾರವಾಡ: ಪ್ರೌಢಶಾಲೆ ಸಹಶಿಕ್ಷಕರಾಗಿ ನೇಮಕವಾದ ಧಾರವಾಡ ಜಿಲ್ಲೆ ಅಭ್ಯರ್ಥಿಗಳಿಗೆ ಬೆಳಗಾವಿ ಸರ್ಕಾರಿ ಶಿಕ್ಷಕರ ಶಿಕ್ಷಣ ಕಾಲೇಜಿನ ಹಾಸ್ಟೆಲ್ ಕ್ಯಾಂಪಸ್, ಚನ್ನಮ್ಮ ವೃತ್ತದಲ್ಲಿ ಮೇ 25ರ ಮಧ್ಯಾಹ್ನ 3ಕ್ಕೆ ಕೌನ್ಸೆಲಿಂಗ್ ನಡೆಯಲಿದೆ. ಜಿಲ್ಲೆಯಲ್ಲಿ ಖಾಲಿಯಿರುವ 134 ಹುದ್ದೆಗಳಿಗೆ ಸ್ಥಳ ನಿಯುಕ್ತಿ ಆದೇಶ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ದಾಖಲೆಗಳೊಂದಿಗೆ ಅವುಗಳ ಒಂದು ಸ್ವಯಂ ದೃಢೀಕೃತ ಝೆರಾಕ್ಸ್ ಸೆಟ್, ಭಾವಚಿತ್ರಗಳೊಂದಿಗೆ ಕೌನ್ಸೆಲಿಂಗ್ಗೆ ಹಾಜರಾಗಬೇಕೆಂದು ಡಿಡಿಪಿಐ ಡಾ. ಬಿ.ಕೆ.ಎಸ್. ವರ್ಧನ್ ತಿಳಿಸಿದ್ದಾರೆ.