ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಜಿಮ್ನಾಸ್ಟಿಕ್ಸ್ ಒಳಾಂಗಣ ಕ್ರೀಡಾಂಗಣಕ್ಕೆ ಪೂಜೆ

Rashmi Kasaragodu
Updated On : 23 May 2013, 11:57 am

ಧಾರವಾಡ: ಸ್ವಸ್ಥ ಸದೃಢ ಯುವ ಜನಾಂಗವನ್ನು ಸಜ್ಜುಗೊಳಿಸುವಲ್ಲಿ ಗರಡಿಮನೆ, ವ್ಯಾಯಮಶಾಲೆ ಜಿಮ್ನಾಸ್ಟಿಕ್ಸ್ನಂತಹ ಅನೇಕ ಕ್ರೀಡೆಗಳು ಸಹಾಯಕವಾಗಿವೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ಇಲ್ಲಿನ ಬಾಲ ಮಾರುತಿ ಸಂಸ್ಥೆಯ ಆವರಣದಲ್ಲಿನ ಹಾರಾಡಿ ರಾಮಣ್ಣ ಶೆಟ್ಟಿ ಸ್ಮರಣಾರ್ಥ ನಿರ್ಮಿಸಲಾದ ಜಿಮ್ನಾಸ್ಟಿಕ್ಸ್ ಒಳಾಂಗಣ ಕ್ರೀಡಾಂಗಣದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಇಂತಹ ಕ್ರೀಡೆಗಳು ಯುವ ಜನಾಂಗದ ಮಾನಸಿಕ ಸದೃಢತೆ ಕಾಯುತ್ತವೆ. ಪ್ರಸ್ತುತ ಇವುಗಳು ನಶಿಸಿ ಹೋಗುತ್ತಿದ್ದು, ಅವುಗಳನ್ನು ಉಳಿಸುವ ಪ್ರಯತ್ನ ನಡೆಯಬೇಕಿದೆ. ಅಲ್ಲದೇ, ಶತಮಾನದಷ್ಟು ಹಳೆಯದಾದ ಬಾಲ ಮಾರುತಿ ಸಂಸ್ಥೆಯ ಅಭಿವೃದ್ಧಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ ಅವರು, ಜಿಮ್ನಾಸ್ಟಿಕ್ಸ್ ಒಳಾಂಗಣ ಕ್ರೀಡಾಂಗಣ ಯೋಜನೆಗೆ ರು. 5ಲಕ್ಷ ಸಹಾಯ ಧನ ಒದಗಿಸುವುದಾಗಿ ತಿಳಿಸಿದರು. ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ಪಾಲಿಕೆ ಸದಸ್ಯರಾದ ರಾಜು ಅಂಬೋರೆ, ಶಿವು ಹಿರೇಮಠ, ಈರೇಶ ಅಂಚಟಗೇರಿ, ಅರುಣ ಜೋಶಿ, ಪ್ರಕಾಶ ಗೋಡಬೋಲೆ, ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ನಿರ್ಮಲಾ ಜವಳಿ, ಟಿ.ಎಸ್. ಪಾಟೀಲ, ಎಸ್.ಎಫ್. ಇಜಂತಕರ, ವಿಠ್ಠಲ ಮುರ್ತುಗುಡ್ಡೆ, ಗೋಪಾಲ ಜೋಶಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement