ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಾಗರಿಕ ಅಣು ಹೊಣೆಗಾರಿಕೆ ಮಸೂದೆ ಸಹಾಯಕಾರಿ

Rashmi Kasaragodu
Updated On : 23 May 2013, 11:55 am

ಹುಬ್ಬಳ್ಳಿ: 2010ರಲ್ಲಿ ಭಾರತದಲ್ಲಿ ಜಾರಿಗೊಂಡಿರುವ ನಾಗರಿಕ ಅಣು ಹೊಣೆಗಾರಿಕೆ ಮಸೂದೆ ಜಗತ್ತಿನಲ್ಲಿ ಅತ್ಯಂತ ಕಠಿಣ ಕಾನೂನಾತ್ಮಕ ಅಂಶಗಳನ್ನು ಹೊಂದಿದ್ದು, ಈ ಮಸೂದೆ ಅಣುಶಕ್ತಿ ಉದ್ಯಮ ಮತ್ತು ಅಣುಶಕ್ತಿ ಅವಘಡದಿಂದ ಹಾನಿ ಅನುಭವಿಸುವ ಸಂತ್ರಸ್ತರನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ ಎಂದು ಸುಪ್ರಿಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ.ಎಸ್. ರಾಜೇಂದ್ರ ಬಾಬು ಹೇಳಿದರು. ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
  ಅಣು ವಿದ್ಯುತ್ ಶಕ್ತಿ ಉತ್ಪಾದನೆ ಪರಿಸರ ಸ್ನೇಹಿ ಆಗಿದ್ದರೂ ಕೂಡ ಅವಘಡ ಸಂಭವಿಸಿದಲ್ಲಿ ಉಂಟಾಗುವ ಪರಿಣಾಮಗಳು ಊಹಿಸಲು ಆಸಾಧ್ಯ ಎನ್ನುವ ಸಂಗತಿ ಕುರಿತು ನಮಗೆ ಅರಿವಿರಬೇಕು.  ಅಮೇರಿಕ-ಭಾರತದ ಮಧ್ಯೆ 2008ರಲ್ಲಿ ಮಾಡಿಕೊಳ್ಳಲಾದ ನಾಗರಿಕ ಅಣು ಒಪ್ಪಂದ, ರಿಯಾಕ್ಟರ್ಗಳನ್ನು ಉತ್ಪಾದಿಸುವ ಅಮೆರಿಕದ ಕಂಪನಿಗಳು ತಾಯ್ನಾಡಿನಲ್ಲಿ ಅಣು ರಿಯಾಕ್ಟರ್ಗಳನ್ನು ವಿಮೆಗೆ ಒಳಪಡಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು. ಕೇಂದ್ರ ಅಣುಶಕ್ತಿ ಇಲಾಖೆಯ ಕಾನೂನು ಸಲಹೆಗಾರ ಜಿತೇಂದ್ರಕುಮಾರ್ ಅವರು ಮಾತನಾಡಿ, ಭಾರತ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕದಿದ್ದರೂ ತನ್ನ ಬದ್ಧತೆಯಿಂದಾಗಿ ಅಣ್ವಸ್ತ್ರ ಹೊಂದಿರುವ ಅಣುಶಕ್ತಿ ಉತ್ಪಾದಿಸುವ ರಾಷ್ಟ್ರಗಳ ಪೈಕಿ ವಿಶಿಷ್ಟ ಸ್ಥಾನದಲ್ಲಿ ನಿಂತಿದೆ. ಭಾರತದಲ್ಲಿ ಹೇರಳವಾಗಿರುವ ಥೋರಿಯಂನಿಂದ ಅಣು ವಿದ್ಯುತ್ ಶಕ್ತಿ ಉತ್ಪಾದಿಸಲು ಆರಂಭಿಸಿದಲ್ಲಿ ಶಕ್ತಿ ಸಂಪನ್ಮೂಲ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement