ವಿದ್ಯಾಮಾನ್ಯತೀರ್ಥರ ಶತಮಾನೋತ್ಸವ
ಧಾರವಾಡ: ಇಲ್ಲಿನ ಶ್ರೀರಂಗ ಮಾರ್ಗದ ಮಾಧ್ವವಿದ್ಯಾಪೀಠದಲ್ಲಿ ಶ್ರೀ ವೇದವ್ಯಾಸ ಜಯಂತಿ, ಶ್ರೀ ವಿದ್ಯಾಮಾನ್ಯ ತೀರ್ಥರ ಶತಮಾನೋತ್ಸವ ಹಾಗೂ 13ನೇ ಮಹಾಸಮಾರಧಾನೆ ನಿಮಿತ್ತ ಜರುಗಿದ ಸಂಗೀತ ಸುಧಾ ಕಾರ್ಯಕ್ರಮದಲ್ಲಿ ರಾಧಿಕಾ ಕಾಖಂಡಿಕಿಯವರು ದಾಸವಾಣಿ ಪ್ರಸ್ತುತಪಡಿಸಿದರು. ದಾಸವಾಣಿಯಲ್ಲಿ ಪುರಂದರ ದಾಸರ, ಮಹಿಪತಿದಾಸರ, ವಿಜಯದಾಸರ, ಜಗನ್ನಾಥದಾಸರ, ಕೃಷ್ಣ ದಾಸರ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ತಬಲಾದಲ್ಲಿ ಶ್ರೀಪಾದ ಮುಳಗುಂದ, ಹಾರ್ಮೋನಿಯಂದಲ್ಲಿ ಗೋಪಾಲ ಕುಲಕರ್ಣಿ ಮತ್ತು ತಂಬೂರಿಯಲ್ಲಿ ಅಶೋಕ ನಿಂಗೋಲಿಯವರು ಸಾಥ್ ನೀಡಿದರು. ಕೊನೆಯಲ್ಲಿ ಶ್ರೀ ವಿದ್ಯೇಶತೀರ್ಥರು ಎಲ್ಲ ಕಲಾವಿದರಿಗೆ ಆಶೀರ್ವದಿಸಿ, ಗೌರವಿಸಿದರು.