ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಪೂರ್ಣ ಮಾಹಿತಿ: ಅಧ್ಯಕ್ಷರ ಆಕ್ರೋಶ

Lingaraj Badiger
Updated On : 24 May 2013, 11:20 am

ಕಲಘಟಗಿ: ತಾಲೂಕು ಮಟ್ಟದ ಅನುಷ್ಠಾನಾಧಿಕಾರಿಗಳು ಅಪೂರ್ಣ ಮಾಹಿತಿ, ಅಸಮರ್ಪಕ ಉತ್ತರ ನೀಡುವುದಾದರೆ ಸಭೆ ನಡೆಸುವುದಾದರೂ ಏಕೆ ಎಂದು ತಾಪಂ ಅಧ್ಯಕ್ಷ ಬಸವಣ್ಣಯ್ಯ ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ಇಲ್ಲಿನ ತಾಪಂ ಸಭಾ ಭವನದಲ್ಲಿ ಕರೆಯಲಾಗಿದ್ದ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಜಲಾನಯನ, ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಅಪೂರ್ಣ ಮಾಹಿತಿ ನೀಡುತ್ತಿದ್ದಂತೆ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ತಾಪಂ ಕಾರ್ಯನಿರ್ವಾಹಕಾಧಿಕಾರಿ ಎಸ್.ಆರ್. ವೀರಕರ ಮುಂದಿನ ಸಭೆಯಲ್ಲಿ ಪೂರ್ಣ ಮಾಹಿತಿ ಒದಗಿಸಲು ಸೂಚಿಸಿದರು.
ತಾಲೂಕಿನ ತಬಕದ ಹೊನ್ನಳ್ಳಿಯಲ್ಲಿ ರು. 2 ಲಕ್ಷ ವೆಚ್ಚದಲ್ಲಿ ಜಲಾನಯನ ಇಲಾಖೆಯ ಕಾಮಗಾರಿ ಕಳಪೆ ಮಟ್ಟದ್ದಾಗಿದೆ. ಲೋಕೋಪಯೋಗಿ ಇಲಾಖೆ ರಸ್ತೆಗಳು ಉತ್ತಮ ಗುಣಮಟ್ಟದಿಂದ ಕೂಡಿಲ್ಲ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳಬೇಕೆಂದು ಅಧ್ಯಕ್ಷರು ಹೇಳುತ್ತಿದ್ದಂತೆ ಉಪಾಧ್ಯಕ್ಷರು ಹಾಗೂ ಸದಸ್ಯರು ಧ್ವನಿಗೂಡಿಸಿದರು.
ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಎಂ.ಆರ್. ನೂಲ್ವಿ ತಜ್ಞ ವೈದ್ಯರ ಅಧ್ಯಕ್ಷರ ಪ್ರಶ್ನೆಗೆ ವಿವರಣೆ ನೀಡಿದರು.
ಹಿಂದುಳಿದ ವರ್ಗ ಇಲಾಖೆಯಿಂದ ತಾಲೂಕು ಕೇಂದ್ರದಲ್ಲಿ ಒಂದು ಕೋಟಿ ವೆಚ್ಚದಲ್ಲಿ ದೇವರಾಜ್ ಅರಸು ಭವನ ನಿರ್ಮಾಣಕ್ಕೆ 10 ಗುಂಟೆ ಜಾಗೆ ನೀಡಬೇಕೆಂದು ಸಭೆಗೆ ವಿಸ್ತರಣಾಧಿಕಾರಿ ಕಟ್ಟಿಮನಿ ಮನವಿ ಮಾಡಿದರು.
ಪಟ್ಟಣ, ವಿವಿಧ ಗ್ರಾಮಗಳಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ನೂತನ ಶಾಲಾ ಕೊಠಡಿ, ಶೌಚಾಲಯ ಕಾಮಗಾರಿಗಳು ಪೂರ್ಣ ಹಂತದಲ್ಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಜಿ. ಮಾಳಗಿ ವಿವರಿಸಿದರು.
ಸಹಾಯಧನದಡಿಯಲ್ಲಿ ನೀಡಲು 2 ಲಕ್ಷ ಸಾಗವಾನಿ ಸಸಿಗಳನ್ನು ತಯಾರಿಸಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬೇಕೆಂದು ವಲಯ ಅರಣ್ಯಾಧಿಕಾರಿ ಎಸ್.ಆರ್. ಚಿಕ್ಕಮಠ ಸಭೆಗೆ ತಿಳಿಸಿದರು.
ತಾಪಂ ಉಪಾಧ್ಯಕ್ಷೆ ಕಾಶವ್ವ ಮುಂದಿನಮನಿ, ಸದಸ್ಯೆ ಗೀತಾ ರಜಪೂತ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement