ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನೀರಾವರಿ ಸಂಶೋಧನೆಗಳನ್ನುರೂಢಿಸಿಕೊಳ್ಳಿ: ರಾಜಕುಮಾರ್

Lingaraj Badiger
Updated On : 24 May 2013, 11:21 am

ಹುಬ್ಬಳ್ಳಿ: ನೀರಾವರಿ ಕ್ಷೇತ್ರದಲ್ಲಿನ ಸಂಶೋಧನೆಗಳನ್ನು ರೈತರು ಕೃಷಿ ಚಟುವಟಿಕೆಯಲ್ಲಿ ಅಳವಡಿಸಿಕೊಂಡು ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಬೆಳವಟಗಿ ನೀರು ನಿರ್ವಹಣಾ ಸಂಶೋಧನಾ ಕೇಂದ್ರದ ಬೇಸಾಯ ತಜ್ಞ ಡಾ.ಎಸ್. ರಾಜಕುಮಾರ್ ಹೇಳಿದರು.
ಈಚೆಗೆ ಬೆಳವಟಗಿ ನೀರು ನಿರ್ವಹಣಾ ಕೇಂದ್ರದಿಂದ ಬೆಳವಟಗಿ ಗ್ರಾಮದಲ್ಲಿ ಆಯೋಜಿಸಿದ್ದ ಮುಂಗಾರು ಹಂಗಾಮು ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿ ಅಭಿಯಂತರ ಡಾ. ಜಿ.ಕೆ. ನೀಲಕಾಂತ್ ಅವರು ರೈತರು ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮಣ್ಣು ವಿಜ್ಞಾನಿ ಡಾ.ಎಸ್.ಎಸ್. ಗುಂಡ್ಲೂರ ಅವರು ನೀರಾವರಿ ಆಶ್ರಯದಲ್ಲಿ ಅಧಿಕ ಇಳುವರಿ ಪಡೆಯಲು ಮಣ್ಣಿನಲ್ಲಿ ಸಮಗ್ರ ಪೋಷಕಾಂಶಗಳನ್ನು ಕಾಯ್ದುಕೊಳ್ಳುವುದು ಮುಖ್ಯ. ಮಣ್ಣಿನ ಆರೋಗ್ಯ ಕಾಪಾಡಲು ಕೃಷಿ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಬೇಕು ಎಂದು ಹೇಳಿದರು. ಗ್ರಾಪಂ ಅಧ್ಯಕ್ಷ ಜಿ.ಎಂ. ಸಂಕನಗೌಡರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಪ್ರಭು ಪಾಟೀಲ, ಬಸವರಾಜ ಯಂಕಂಚಿ, ವೆಂಕಮ್ಮ ತಳವಾರ ಇದ್ದರು. ಎಂ.ಬಿ. ಹಡಪದ ನಿರೂಪಿಸಿದರು. ರಾಮಚಂದ್ರ ಪದಕಿ ವಂದಿಸಿದರು. ಸುಮಾರು 50ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement