ಮಾನಸ ಸರೋವರದಲ್ಲಿ ಜೂನ್ 26ರಂದು ಮಹಾರುದ್ರ ಯಾಗ
ಹುಬ್ಬಳ್ಳಿ: ಹಿಂದು, ಬೌದ್ಧ, ಜೈನ ಮತ್ತು ಬಾನಪೋ ಧರ್ಮಾನುಯಾಯಿಗಳಿಗೆ ಪವಿತ್ರ ಕ್ಷೇತ್ರವಾಗಿರುವ ಕೈಲಾಸ ಮಾನಸ ಸರೋವರ ತಟದಲ್ಲಿ ಜೂ.26, 2013ರಂದು ಶಾಶ್ವತಿ ಧಾರ್ಮಿಕ ಮಹಾಸಂಸ್ಥಾನ ಸ್ಥಾಪಕ ವೇದಬ್ರಹ್ಮ ಡಾ.ಭಾನುಪ್ರಕಾಶ ಅವರ ನೇತೃತ್ವದಲ್ಲಿ ಶಕ್ತಿ ಸಹಿತ ಮಹಾರುದ್ರಯಾಗ ಮತ್ತು ಮಹಾಲಕ್ಷ್ಮಿ ಸಮೇತ ಸತ್ಯನಾರಾಯಣ ಪೂಜೆ ಆಯೋಜಿಸಲಾಗಿದೆ.
ಮಾನಸ ಸರೋವರದ ವಿಶೇಷ ಯಾತ್ರೆ ಬೆಂಗಳೂರಿನಿಂದ ಜೂನ್ 20ರಂದು ಹೊರಡಲಿದ್ದು ಒಟ್ಟು 14 ದಿನಗಳ ತೀರ್ಥಯಾತ್ರೆ ನಡೆಯಲಿದೆ. ಬೆಂಗಳೂರಿನಿಂದ ನೇಪಾಳದ ಕಠ್ಮಂಡುವರೆಗೆ ವಿಮಾನದಲ್ಲಿ ಪ್ರಯಾಣ ನಂತರ ಮಾನಸ ಸರೋವರಕ್ಕೆ ಯಾತ್ರೆ ಮುಂದುವರಿಯಲಿದೆ.
ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಹಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತ ಬಂದಿರುವ ಬೆಂಗಳೂರಿನ ನಾರಾಯಣಿ ಹಾಲಿಡೇಸ್ ಈ ಬಾರಿಯೂ ಯಾತ್ರೆ ಆಯೋಜಿಸಿದ್ದು, ತಲಾ ಒಬ್ಬ ಯಾತ್ರಾರ್ಥಿಗೆ ರು. 30 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ.
ನೇಪಾಳ ಸರ್ಕಾರದ ಅಧಿಕೃತ ಸಾರ್ವಜನಿಕ ಸಂಪರ್ಕ ಕೇಂದ್ರವಾಗಿ ನಾರಾಯಣಿ ಹಾಲಿಡೇಸ್ ಸಂಸ್ಥೆ ಕೆಲಸ ಮಾಡುತ್ತಿದ್ದು, ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿಚ್ಛಿಸುವವರು ದೂರವಾಣಿ ಮುಖಾಂತರ ನಾರಾಯಣಿ ಹಾಲಿಡೇಸ್ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ ನಾರಾಯಣಿ ಹಾಲಿಡೇಸ್ ನಂ.24, ಬಾಲಾಜಿ ಪ್ಲಾಜಾ, 2ನೇ ಮಹಡಿ, 2ನೇ ಅಡ್ಡರಸ್ತೆ, ಕಿರ್ಲೋಸ್ಕರ್ ಕಾಲೋನಿ, 2ನೇ ಹಂತ, ಶಂಕರಮಠ ವೃತ್ತದ ಹತ್ತಿರ ಬಸವೇಶ್ವರ ನಗರ ಬೆಂಗಳೂರು- 560079 ಮೊ: 080-42151225/226, 9845608096ನ್ನು ಸಂಪರ್ಕಿಸಿ.