ಕುಂದಗೋಳ: ಶಾಸಕ ಶಿವಳ್ಳಿಗೆ ಸನ್ಮಾನ
ಕುಂದಗೋಳ: ನೂತನ ಶಾಸಕ ಸಿ.ಎಸ್. ಶಿವಳ್ಳಿ ಅವರನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಗುರುಸ್ವಾಮಿ ಬಾಳಿಹಳ್ಳಿಮಠ, ಗೌರವ ಅಧ್ಯಕ್ಷ ಕೆ.ಬಿ. ಹೊಳ್ಳನವರ, ಕಾರ್ಯದರ್ಶಿ ಅಶೋಕ ಘೋರ್ಪಡೆ, ಬಸವರಾಜ ಹೊಳ್ಳನವರ, ಮಂಜುನಾಥ ಶಿವಕ್ಕನವರ, ಯಲ್ಲಪ್ಪ ಹೆಬಸೂರ, ವಾಸುದೇವ ಮುರಗಿ, ವೀರೇಶ ಪ್ರಳಯಕಲ್ಮಠ, ಶೀತಲ ಮುರಗಿ ಮತ್ತಿತರರು ಹಾಜರಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪತ್ರಕರ್ತರ ಸಂಘದ ಚಟುವಟಿಕೆಗಳಿಗಾಗಿ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಲೋಕಾಯುಕ್ತರಿಂದ ದೂರು ಸ್ವೀಕಾರ
ಧಾರವಾಡ: ಕರ್ನಾಟಕ ಲೋಕಾಯುಕ್ತ ಧಾರವಾಡ ಕಚೇರಿ ಪೊಲೀಸ್ ಉಪಾಧೀಕ್ಷಕ ಮಹೇಶ ಮೇಘಣ್ಣವರ ಹಾಗೂ ಪಿ.ಐ.ಎಂ. ಬಿದರಿ, ಬಾಬಾ ಸಾಹೇಬ್ ಹುಲ್ಲಣ್ಣವರ ಅವರು ಮೇ 29ರಂದು ಬೆಳಿಗ್ಗೆ 11ರಿಂದ ಮಧಾಹ್ನ 1 ಗಂಟೆಯವರೆಗೆ ನವಲಗುಂದ ಐ.ಬಿ. ಯಲ್ಲಿ ಮತ್ತು ಮಧ್ಯಾಹ್ನ 3ರಿಂದ ಸಂಜೆ 5 ಗಂಟೆಯವರೆಗೆ ಹುಬ್ಬಳ್ಳಿ ಸರ್ಕ್ಯೂಟ್‌ಹೌಸ್‌ನಲ್ಲಿ ಹಾಗೂ ಮೇ 31ರಂದು ಬೆಳಿಗ್ಗೆ 11ರಿಂದ 1 ಗಂಟೆಯವರೆಗೆ ಕುಂದಗೋಳ ಐ.ಬಿ.ಯಲ್ಲಿ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5 ಗಂಟೆವರೆಗೆ ಕಲಘಟಗಿ ಐ.ಬಿ. ಯಲ್ಲಿ ದೂರು ಸ್ವೀಕರಿಸುವರು.
ಕೃಷಿ ಸಾಲ ವಿತರಣೆಗೆ ಸಿದ್ಧರಾಗಿ: ಮೇಘಣ್ಣವರ
ಹುಬ್ಬಳ್ಳಿ: ಮುಂಗಾರು ಹಂಗಾಮು ಪ್ರಾರಂಭಗೊಳ್ಳುತ್ತಿದ್ದು, ರೈತಾಪಿ ವರ್ಗ ಕೃಷಿ ಚಟುವಟಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದರಿಂದ ಬ್ಯಾಂಕುಗಳು ಅವರಿಗೆ ಅಗತ್ಯಸಾಲ ನೀಡಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪಿ.ಎ. ಮೇಘಣ್ಣನವರ ತಿಳಿಸಿದರು.
ಜಿಲ್ಲಾ ಅಗ್ರಣಿಯ ವಿಜಯಾ ಬ್ಯಾಂಕ್ ರೂಪಿಸಿದ 2013-14ನೇ ಸಾಲಿನ ಜಿಲ್ಲಾ ಸಾಲ ಯೋಜನೆ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು. ಆರ್ಥಿಕ ಒಳಗೊಳ್ಳುವಿಕೆಗಾಗಿ ವಿವಿಧ ಬ್ಯಾಂಕ್‌ಗಳಿಗೆ ನೀಡಿದ ಹಳ್ಳಿಗಳಲ್ಲಿ ಶಾಖೆ ತೆರೆಯುವುದು ಅಥವಾ ಬ್ಯಾಂಕ್ ಸೇವಾ ಪ್ರತಿನಿಧಿ ನೇಮಿಸುವಲ್ಲಿ ವಿಳಂಬ ಸಲ್ಲದು ಎಂದರು. ನೇರ ಸೌಲಭ್ಯ ವರ್ಗಾವಣೆ (ಡೈರೆಕ್ಟ್ ಬೆನ್‌ಫಿಟ್ ಟ್ರಾನ್ಸ್‌ಫರ್) ಯೋಜನೆಗೆ ಜಿಲ್ಲೆಯನ್ನ್ನು ಆಯ್ಕೆ ಮಾಡಲಾಗಿದ್ದು, ಅದಕ್ಕಾಗಿ ಆಧಾರ ಸಂಖ್ಯೆ ಸಹಿತ ಬ್ಯಾಂಕ್ ಖಾತೆ ತೆಗೆಯುವ ಕಾರ್ಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲು ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬ್ಯಾಂಕ್‌ಗಳು ಕಾಲಕಾಲಕ್ಕೆ ತಪ್ಪದೇ ವರದಿಗಳನ್ನ್ನು ಲೀಡ್ ಬ್ಯಾಂಕ್‌ಗೆ ಸಲ್ಲಿಸಬೇಕು. ವರದಿ ವಿಳಂಬದಿಂದ ಪ್ರಗತಿ ಪರಿಶೀಲನೆ ಸಭೆಯ ಉದ್ದೇಶ ಸಫಲವಾಗುವುದಿಲ್ಲ ಎಂದು ನುಡಿದ ಅವರು, ಸಭೆಗೆ ಗೈರು ಹಾಜರಾದವರ ಬಗ್ಗೆ ಮೇಲಧಿಕಾರಿಗಳಿಗೆ ಹಾಗೂ ಅರ್‌ಬಿಐಗೆ ತಿಳಿಸಲು ಸೂಚಿಸಿದರು. ಜಿಲ್ಲೆಯ ನಬಾರ್ಡ್ ಎಜಿಎಂ ವೈ. ಮಹದೇವಯ್ಯ ಮಾತನಾಡಿ, ಸಾಲ ಮತ್ತು ಠೇವಣಿ ಅನುಪಾತ ಕಾಯ್ದಕೊಳ್ಳಲು ಹಲವು ಬ್ಯಾಂಕುಗಳಿಗೆ ಸೂಚನೆ ನೀಡಿದರಲ್ಲದೇ ಠೇವಣಿದೊಂದಿಗೆ ಸಂಗ್ರಹದೊಂದಿಗೆ ಸಾಲ ವಿತರಣೆ ಆಗಬೇಕಿರುವುದು ಅಷ್ಟೇ ಮಹತ್ವದ್ದು ಎಂದರು.
ಅಭಿನಂದನಾ ಕಾರ್ಯಕ್ರಮ ಇಂದು
ಕುಂದಗೋಳ: ಪಟ್ಟಣದ ಟಿಎಪಿಸಿ ಎಂಎಸ್ ಆವರಣದಲ್ಲಿ 27ರ ಮುಂಜಾನೆ 11 ಗಂಟೆಗೆ ನೂತನ ಶಾಸಕರಾಗಿ ಆಯ್ಕೆಯಾದ ಸಿ.ಎಸ್. ಶಿವಳ್ಳಿ ಅವರಿಂದ ಕ್ಷೇತ್ರದ ಮತದಾರರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದ್ದಾರೆ. ಇದೇ ಸಂದರ್ಭ ತಾಲೂಕು ಗ್ರಾಮೀಣ ಕಾಂಗ್ರೆಸ್ ಸಮಿತಿ ಹಾಗೂ ಪಕ್ಷದ ಸಮಸ್ತ ಕಾರ್ಯಕರ್ತರಿಂದ ನೂತನ ಶಾಸಕರಿಗೆ ಸತ್ಕಾರ ಸಮಾರಂಭ ಜರುಗಲಿದೆ ಎಂದು ಕುಂದಗೋಳ ತಾಲೂಕು ಅಧ್ಯಕ್ಷ ದಯಾನಂದ ಕುಂದೂರ ಹಾಗೂ ತಾಲೂಕಿನ ಛಬ್ಬಿ ಬ್ಲಾಕ್ ಅಧ್ಯಕ್ಷ ಗುರುಪಾದ ಕಮಡೊಳ್ಳಿ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇಮಕ
ಕುಂದಗೋಳ: ತಾಲೂಕಿನ ಕಳಸ ಗ್ರಾಮದ ಹನುಮಂತಪ್ಪ ಯಲ್ಲಪ್ಪ ಹೊಗರಿ ಇವರನ್ನು ಧಾರವಾಡ ಜಿಲ್ಲಾ ಹಿಂದುಳಿದ ವರ್ಗಗಳ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಕೆಪಿಸಿಸಿ ಹಿಂದುಳಿದ ವರ್ಗದ ಆಧ್ಯಕ್ಷ ಎಂ.ಸಿ. ವೇಣುಗೋಪಾಲರ ಆದೇಶದ ಮೇರೆಗೆ ಧಾರವಾಡ ಜಿಲ್ಲಾ ಗ್ರಾಮೀಣ ಹಿಂದುಳಿದ ವರ್ಗಾಧ್ಯಕ್ಷ ಸಿ.ಎಂ. ಬಡಿಗೇರ ನೇಮಿಸಿದ್ದಾರೆ.