ಧಾರವಾಡ: ಗಮನ ಸೆಳೆದ ಪುಸ್ತಕ ಮೇಳ
ಧಾರವಾಡ: ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ 2 ದಿನಗಳ ಕಾಲ ನಡೆಯಲಿರುವ ಜಿಲ್ಲಾ 8ನೇ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಮೇಳ ಎಲ್ಲರ ಗಮನ ಸೆಳೆಯುತ್ತಿದೆ.
ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಪುಸ್ತಕಗಳು, ಸಾಹಿತ್ಯ ಪ್ರಕಾಶನ, ಧಾತ್ರಿ ಪ್ರಕಾಶನ, ಗೋರಖಪುರ ಪುಸ್ತಕ ಮೇಳ ಹೀಗೆ ಹಲವು ಪ್ರಕಾಶನಗಳು ಪುಸ್ತಕಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿವೆ. ಹಿರಿಯ ಸಾಹಿತಿಗಳ ಕೃತಿಗಳು ಮಾತ್ರವಲ್ಲದೇ, ಮಕ್ಕಳ ಕಥೆ, ರಾಮಾಯಣ, ಮಹಾಭಾರತ, ಕಾನೂನು, ಆಹಾರ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಲಭ್ಯ. ಸಮ್ಮೇಳನ ಭಾನುವಾರವೂ ಇದ್ದು, ಪುಸ್ತಕ ಪ್ರದರ್ಶನ ಸಹ ಇರುತ್ತದೆ. ಆಸಕ್ತ ಪುಸ್ತಕ ಪ್ರಿಯರು ಮೇಳಕ್ಕೆ ಭೇಟಿ ನೀಡಬಹುದು.