ಅಸಮಾನತೆ ಇನ್ನೂ ಆಚರಣೆಯಲ್ಲಿದೆ; ಟೆಂಗಿನಕಾಯಿ
ಹುಬ್ಬಳ್ಳಿ: ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಲು 12ನೇ ಶತಮಾನದಲ್ಲಿ ಬಸವಣ್ಣವರು ದೊಡ್ಡ ಕ್ರಾಂತಿಯನ್ನೇ ಮಾಡಿದರು. ಆದರೆ, ಇಂದಿಗೂ ಕೆಲ ಕಡೆ ಈ ಆಚರಣೆ ರೂಢಿಯಲ್ಲಿದೆ ಎಂದು ಬಾಲ ವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ವಿಷಾದ ವ್ಯಕ್ತಪಡಿಸಿದರು.
ಬಸವ ಜಯಂತಿ ಅಂಗವಾಗಿ ಇಲ್ಲಿಯ ಬಸವೇಶ್ವರ ನಗರದಲ್ಲಿ ಪ್ರಗತಿ ಮಹಿಳಾ ವೇದಿಕೆ, ಸುವರ್ಣಾ ಲೇಡಿಸ್ ಕ್ಲಬ್ ಮತ್ತು ಬಸವೇಶ್ವರ ನಗರ ರಹವಾಸಿಗಳ ಸಂಘ ಮತ್ತು ಶ್ರೀ ಸಂಗಮೇಶ್ವರ ದೇವಸ್ಥಾನ ಸಮಿತಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು. ವಿವಿಧ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಉಮಾ ಮುಕುಂದ, ಆನಂದ ರೋಣಿಮಠ ಹಾಗೂ ಕೆ.ಎಂ. ಕುದರಿ ಅತಿಥಿಗಳಾಗಿದ್ದರು. ಪುಷ್ಪಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಾಮಲಾ ಕುಲಕರ್ಣಿ ನಿರೂಪಿಸಿದರು. ಜಯಾ ಹಿರೇಮಠ ವಂದಿಸಿದರು.