ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಿಇಟಿಯಲ್ಲಿ ಉತ್ತಮ ಸಾಧನೆ

Lingaraj Badiger
Updated On : 30 May 2013, 11:31 am

ಧಾರವಾಡ: ಇಲ್ಲಿನ ವಿದ್ಯಾಪೋಷಕ ಸಂಸ್ಥೆಯು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿರುವ 254 ವಿದ್ಯಾರ್ಥಿಗಳಿಗೆ ಅಗತ್ಯ ಧನ ಸಹಾಯ, ಪುಸ್ತಕ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸಿ ಮಾರ್ಗದರ್ಶನ ನೀಡಿತ್ತು.
ಈ ಪೈಕಿ 205ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಹುಬ್ಬಳ್ಳಿಯ ವಿದ್ಯಾಚೇತನ ಕಾಲೇಜಿನ ವಿದ್ಯಾರ್ಥಿ ಪಿಯುಸಿಯಲ್ಲಿ ಶೇ. 94ರಷ್ಟು ಸಾಧನೆ ಮಾಡಿದ್ದು, ಸಿಇಟಿಯಲ್ಲಿ 876ನೇ ರ್ಯಾಂಕ್ ಗಳಿಸಿದ್ದಾನೆ. ಹುಬ್ಬಳ್ಳಿಯ ಚೇತನಾ ಕಾಲೇಜಿನ ವಿಶಾಲ ವಡಗಾವಿ ಪಿಯುಸಿಯಲ್ಲಿ ಶೇ. 92ರಷ್ಟು ಅಂಕ ಗಳಿಸಿದ್ದು, ಸಿಇಟಿಯಲ್ಲಿ 1013ನೇ ರ್ಯಾಂಕ್, ಇದೇ ರೀತಿ ಅದೇ ಕಾಲೇಜಿನ ಕಾರ್ತಿಕ ಮೆಣಸಿನಕಾಯಿ ಪಿಯುಸಿಯಲ್ಲಿ ಶೇ. 95ರಷ್ಟು ಅಂಕ ಗಳಿಸಿದ್ದು, ಸಿಇಟಿಯಲ್ಲಿ 2338ನೇ ರ್ಯಾಂಕ್ ಪಡೆದಿದ್ದಾನೆ.
ನವೀನ ಜಾಲಿಮರದ ಎಂಬ ವಿದ್ಯಾರ್ಥಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕಲಿತಿದ್ದು ಪಿಯುಸಿಯಲ್ಲಿ ಶೇ. 90ರಷ್ಟು ಅಂಕ ಗಳಿಸಿದ್ದು, ಸಿಇಟಿಯಲ್ಲಿ 3624ನೇ ರ್ಯಾಂಕ್ ಗಳಿಸಿದ್ದಾನೆ. ಈ ಎಲ್ಲ ವಿದ್ಯಾರ್ಥಿಗಳು ಬಡತನದಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 0836-2747357 ಅಥವಾ ಢಿಢಿಢಿ.ಢ್ಝಜಣಛಠ್ಟಝಛ್ಞ.್ಟ್ಠ್ಜ ಸಂಪರ್ಕಿಸಬಹುದು ಎಂದು ಪ್ರಕಟಣೆ  ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement