ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಶಾಸಕತ್ವ ರದ್ದುಗೊಳಿಸುವಂತೆ ಕರವೇ ಒತ್ತಾಯ

Lingaraj Badiger
Updated On : 31 May 2013, 12:22 pm

ಹುಬ್ಬಳ್ಳಿ: ಮರಾಠಿಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಬೆಳಗಾವಿ ದಕ್ಷಿಣ ಶಾಸಕ ಸಂಭಾಜಿ ಪಾಟೀಲ ಮತ್ತು ಖಾನಾಪುರ ಶಾಸಕ ಅರವಿಂದ ಪಾಟೀಲ ಅವರ ಶಾಸಕತ್ವ ರದ್ದುಗೊಳಿಸಬೇಕು ಎಂದು ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ನಗರದ ದುರ್ಗದ ಬೈಲ್‌ನಿಂದ ಆರಂಭವಾದ ಕರವೇ ಪ್ರತಿಭಟನಾ ಮೆರವಣಿಗೆ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ, ಮರಾಠಿಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಅರವಿಂದ ಪಾಟೀಲ ಮತ್ತು ಸಂಭಾಜಿ ಪಾಟೀಲ ಅವರ ಪ್ರತಿಕೃತಿ ದಹಿಸಲಾಯಿತು. ಇದೇ ಸಂದರ್ಭ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕನ್ನಡ ಮಕ್ಕಳ ಪಕ್ಷದ ಅಶೋಕ ಖೇಣಿ ಮತ್ತು ಅಲ್ಲಾಹುವಿನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಗುಲ್ಬರ್ಗ ಶಾಸಕ ಖಮರುಲ್ಲ ಇಸ್ಲಾಂ ಅವರ ಪ್ರತಿಕೃತಿಗಳನ್ನು ಕೂಡ ದಹಿಸಲಾಯಿತು.
ನಂತರ ಮಿನಿವಿಧಾನಸೌಧಕ್ಕೆ ತೆರಳಿದ ಪ್ರತಿಭಟನಾಕಾರರು ತೆರಳಿ ತಹಸೀಲ್ದಾರ್ ಮುಖಾಂತರ ವಿಧಾನಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿ ಕನ್ನಡಕ್ಕೆ ವಿರೋಧ ತೋರಿದ ಈ ನಾಲ್ವರ ಶಾಸಕತ್ವ ರದ್ದುಗೊಳಿಸಬೇಕು ಎಂದು ಮನವಿ ಸಲ್ಲಿಸಿದರು.
ಕರವೇ ಪದಾಧಿಕಾರಿಗಳಾದ ಹನುಮಂತಪ್ಪ ಮೇಟಿ, ಗೋಪಾಲ ಪಾಟೀಲ, ಸಾಗರ ಗಾಯಕವಾಡ, ಅಮೃತ ಇಜಾರಿ ಸೇರಿದಂತೆ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement