ಹುಬ್ಬಳ್ಳಿಗೆ ಕಾಲಿಟ್ಟ ವಿ2
ಹುಬ್ಬಳ್ಳಿ: ಗ್ರಾಹಕರಿಗೆ ಉತ್ತಮ ಶಾಪಿಂಗ್ ಅನುಭವ ನೀಡುವ ವಿ2 ರಿಟೇಲ್ ಹುಬ್ಬಳ್ಳಿ ಮೂಲಕ ಕರ್ನಾಟಕಕ್ಕೆ ಕಾಲಿಟ್ಟಿದ್ದು, ಪ್ರತಿ ತಿಂಗಳಿಗೆ 1.5 ಕೋಟಿಯ ವ್ಯಾಪಾರದ ನಿರೀಕ್ಷೆ ಹೊಂದಿದೆ ಎಂದು ಸಂಸ್ಥೆ ಪ್ರತಿನಿಧಿ ಅಮರ್ ಜ್ಯೋತಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ವಿನೂತನ ಬಗೆಯ ಸಂಪೂರ್ಣ ಕುಟುಂಬದ ಮಳಿಗೆಯಾಗಿದ್ದು, ಕಡಿಮೆ ಬೆಲೆಯಲ್ಲಿ ಹೊಸ ಮತ್ತು ಉತ್ತಮ ಶಾಪಿಂಗ್ ಅನುಭವ ನೀಡುತ್ತದೆ ಎಂದರು.
ವಿ2 ದೇಶದಾದ್ಯಂತ 14 ಮಳಿಗೆಗಳನ್ನು ಹೊಂದಿದ್ದು ಪ್ರತಿ ತಿಂಗಳ ರು. 110 ಕೋಟಿಯ ವಹಿವಾಟು ನಡೆಸುತ್ತಿದೆ. ಕರ್ನಾಟಕದಲ್ಲಿ ಮೊಟ್ಟ ಮೊದಲು ಆಗಮಿಸಿರುವ ವಿ2 ಮುಂಬರುವ ದಿನಗಳಲ್ಲಿ ಮತ್ತೆ ಎರಡು ನಗರಗಳಲ್ಲಿ ಮಳಿಗೆ ಆರಂಭಿಸುವ ಯೋಜನೆ ಹಾಕಿಕೊಂಡಿದೆ. ವಿ2ನಲ್ಲಿ 1500 ಬಗೆಯ ಶಾಪಿಂಗ್ ವಸ್ತುಗಳಿದ್ದು, ಜನ ಒಂದೇ ಮಳಿಗೆಯಲ್ಲಿ ಮನೆಗೆ ಬೇಕಾಗುವ ಎಲ್ಲ ಸಾಮಗ್ರಿ ಖರೀದಿಸಬಹುದು ಎಂದರು.
ಉ-ಕವನ್ನು ದೃಷ್ಟಿಕೋನವಾಗಿಟ್ಟುಕೊಂಡು ಹುಬ್ಬಳ್ಳಿಯಲ್ಲಿ ಮಳಿಗೆ ತೆರೆಯಲಾಗಿದೆ. ಹುಬ್ಬಳ್ಳಿಯಲ್ಲಿ ಅನೇಕ ಶಾಪಿಂಗ್ ಮಾಲ್‌ಗಳಿದ್ದರೂ ವಿನ್ಯಾಸ, ಕಡಿಮೆ ಬೆಲೆ, ಗುಣಮಟ್ಟದಿಂದಾಗಿ ಖಂಡಿತವಾಗಿ ಗ್ರಾಹಕರನ್ನು ಆಕರ್ಷಿಸಲಿದೆ. ಹೀಗಾಗಿ ವಿ2 ಹುಬ್ಬಳ್ಳಿಯಲ್ಲಿ ಉತ್ತಮ ವಹಿವಾಟು ನಡೆಸಲಿದೆ ಎಂದರು. ವಿನೋದ ರಾಯ್, ಪಾಠಕ ಮತ್ತಿತರರು ಗೋಷ್ಠಿಯಲ್ಲಿದ್ದರು.
--