ಕನ್ನ್ನಡ ಭಾಷೆ ಶ್ರೀಮಂತಿಕ್ನೆ ಹೆಚ್ಚಿಸಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 3
ಕನ್ನ್ನಡಿಗರು ನಿತ್ಯ ಜೀವನದಲ್ಲಿ ಕನ್ನ್ನಡ ಬಳಸುವ ಮೂಲಕ ಕನ್ನ್ನಡ ಭಾಷೆಯ ಶ್ರೀಮಂತಿಕ್ನೆ ಹೆಚ್ಚಿಸಬೇಕು ಎಂದು ಪ್ರೊ. ವಸಂತಾ ಕಲ್ಯಾಣಿ ಹೇಳಿದರು.
ಕೆಎಲ್ಇ ಸಂಸ್ಥೆಯ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯ ಕರ್ನಾಟಕ ಸಂಘ ಆಯೋಜಿಸಿದ್ದ 58ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾತನಾಡಿದರು.
ಭಾಷಾಭಿಮಾನ ಮತ್ತು ಸಬಲೀಕರಣಕ್ಕೆ ಪ್ರತಿಯೊಬ್ಬ ಕನ್ನ್ನಡಿಗರು ಕೈಜೋಡಿಸಬೇಕು ಎಂದು ಹೇಳಿದರು.
ಕರ್ನಾಟಕ ಸಂಘದ ಕಾರ್ಯಾಧ್ಯಕ್ಷೆ ಡಾ. ವಿಜಯಶ್ರೀ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿ, ಕನ್ನ್ನಡ ಸರಳ ಸುಂದರ ಭಾಷೆಯಾಗಿದೆ. ವಿದ್ಯಾರ್ಥಿಗಳು ಬೇರೆ ಬೇರೆ ಭಾಷೆಗಳನ್ನ್ನು ಕಲಿತು ತಮ್ಮ ಜ್ಞಾನ್ನ ವೃದ್ಧಿಸಿಕೊಳ್ಳಬೇಕು ಎಂದರು.
ಪದವಿಪೂರ್ವ ಕಾಲೇಜು ಪ್ರಾಚಾರ್ಯ ಪ್ರೊ. ಪಿ.ಜಿ. ಪಾಟೀಲ ಸ್ವಾಗತಿಸಿದರು.
ವಿದ್ಯಾರ್ಥಿನಿ ಆರತಿ ಪಾಟೀಲ ನಾಡಗೀತೆ ಪ್ರಸ್ತುತಪಡಿಸಿದರು.
ಪ್ರೊ. ಬಿ.ಎಂ. ಗಂಗಾಧರಸ್ವಾಮಿ, ಪ್ರೊ. ಜೆ.ಸಿ. ನಾಯ್ಕರ, ಗ್ರಂಥಪಾಲಕ ಬಿ.ಎಸ್. ಮಾಳವಾಡ ಪ್ರೊ. ಎಂ.ಎಸ್. ಸುಣಗಾರ,ಪ್ರೊ. ವಿ.ವೈ. ಗುಬ್ಬಣ್ಣವರ, ಪ್ರೊ. ಎಲ್.ಡಿ. ಹೊರಕೇರಿ, ಡಾ. ಬಿ.ಆರ್. ಪಾಟೀಲ, ಪ್ರೊ. ಎಂ.ಜೆ. ಹಡಗಲಿ, ಪ್ರೊ. ಎ.ಬಿ. ಮೇಟಿ, ಪ್ರೊ. ಉಮಾ ಇನ್ನಿತರರು ಇದ್ದರು.
ಡಾ. ಐ.ಆರ್. ಹರಕುಣಿ ನಿರೂಪಿಸಿದರು. ಕರ್ನಾಟಕ ಸಂಘದ ಕಾರ್ಯದರ್ಶಿ ಕೆಂಚನಗೌಡ ಪಾಟೀಲ ವಂದಿಸಿದರು.
ಕನ್ನಡ ಭಾಷೆ ಪ್ರೀತಿಸಿ: ಹೊಸಮನಿ
ಹುಬ್ಬಳ್ಳಿ: ಕನ್ನಡ ಭಾಷೆ ಪ್ರೀತಿಸುತ್ತ ಇತರ ಭಾಷೆ ಗೌರವಿಸಬೇಕು ಎಂದು ಪ್ರಾಚಾರ್ಯ ಡಾ.ಎಂ.ಟಿ. ಹೊಸಮನಿ ಹೇಳಿದರು. ನಗರದ ಪಿ.ಸಿ. ಜಾಬಿನ್ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಿಗರಲ್ಲಿ ಭಾಷಾಭಿಮಾನ ಜಾಗೃತಗೊಳ್ಳಬೇಕು ಎಂದು ಸಲಹೆ ನೀಡಿದರು. ಕನ್ನಡ ವಿಭಾಗದ ಉಪನ್ಯಾಸಕಿ ಭಾಗ್ಯಜ್ಯೋತಿ ಹಿರೇಮಠ ಮಾತನಾಡಿ, ಕನ್ನಡಿಗರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳುವುದು ಅನಿವಾರ್ಯ ಹಾಗೂ ಆವಶ್ಯಕವಾಗಿದೆ ಎಂದರು. ಸೌಮ್ಯಾ ಆಲೂರ ಪ್ರಾರ್ಥಿಸಿದರು. ಶ್ರುತಿ ನಾಯ್ಡು ನಿರೂಪಿಸಿದರು. ವಿನಾಯಕ ಬೂದಿಹಾಳ ವಂದಿಸಿದರು.
ಮಣಕವಾಡ: ಎನ್ನೆಸ್ಸೆಸ್ ಶಿಬಿರ ಸಮಾರೋಪ
ಅಣ್ಣಿಗೇರಿ: ಇಲ್ಲಿಗೆ ಸಮೀಪದ ಮಣಕವಾಡದಲ್ಲಿ ಸ್ಥಳೀಯ ಅಮೃತೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭ ಜರುಗಿತು. ಪ್ರಾಚಾರ್ಯ ಎನ್.ಜಿ. ಗದ್ದೆಗೌಡರ ಮಾತನಾಡಿ, ಎನ್ಎನ್ಎಸ್ ಶಿಬಿರದಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ತೊಡಗಬೇಕು ಎಂದರು. ಕಾರ್ಯಕ್ರಮ ಯೋಜನಾಧಿಕಾರಿ ಎನ್.ಟಿ. ಸೊಟಕನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. 7 ದಿನಗಳ ಶಿಬಿರದಲ್ಲಿ ಶಿಬಿರಾರ್ಥಿಗಳು ಅನ್ನದಾನೇಶ್ವರ ಮಠದ ಪ್ರದೇಶ ಸ್ವಚ್ಛಗೊಳಿಸಿದಲ್ಲದೆ, ಸಸಿ ನೆಟ್ಟರು. ಗ್ರಾಮದ ಮುಖಂಡರು ಶಿಬಿರಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿದರು. ಜಿ.ಎಲ್ ಹೊಸಮನಿ, ಆರ್.ಸಿ ಹಿರೇಮಠ, ಅಶೋಕ ಕುಸುಗಲ್ ಉಪಸ್ಥಿತರಿದ್ದರು. ಇದೇ ವೇಳೆ, ಎನ್.ಟಿ. ಸೊಟಕನಾಳ, ಎಸ್.ಬಿ. ಪಾಟೀಲ ಅವರನ್ನು ಗ್ರಾಪಂ ಸದಸ್ಯರು ಸನ್ಮಾನಿಸಿದರು. ಎಸ್.ಬಿ. ಪಾಟೀಲ ನಿರೂಪಿಸಿದರು. ಎಸ್.ಬಿ. ಸೊಟಕನಾಳ ವಂದಿಸಿದರು.
ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ: ಅವಧಿ ವಿಸ್ತರಣೆ
ಧಾರವಾಡ: ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣ ತರಬೇತಿಯ ಶಿಷ್ಯವೇತನಕ್ಕೆ ಅರ್ಜಿ ಸ್ವೀಕರಿಸುವ ಅವಧಿಯನ್ನು ನವೆಂಬರ್ 8ರ ವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಧಾರವಾಡ: ನೇಯ್ಗೆ ತರಬೇತಿಗೆ ಅರ್ಜಿ ಆಹ್ವಾನ
ಧಾರವಾಡ: ಸೀವಿಂಗ್ ಮಶಿನ್ ಆಪರೇಟರ್ ವಿದ್ಯುತ್ ಹಾಗೂ ಕೈಮಗ್ಗ ನೇಯ್ಗೆ ತರಬೇತಿಗಾಗಿ ಕನಿಷ್ಠ 5ನೇ ತರಗತಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 18ರಿಂದ 35ರ ವಯೋವುತಿಯಲ್ಲಿರುವ ಆಸಕ್ತರು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಉಚಿತ ಅರ್ಜಿ ಪಡೆದು ನವೆಂಬರ್ 11ರ ಒಳಗಾಗಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ತಾಪಂ, ಗ್ರಾಪಂ, ಪುರಸಭೆ ಹಾಗೂ ನಗರಸಭೆಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಅದರನ್ವಯ ಅರ್ಜಿಯನ್ನು ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂ. ಸಂ 0836- 2448834 ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಡಿ
ಧಾರವಾಡ: ಸಾರ್ವಜನಿಕ ಕ್ಷೇತ್ರದಲ್ಲಿ ದಿನನಿತ್ಯ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಯುವಜನತೆ ಹಾಗೂ ಸಾರ್ವಜನಿಕರು ಪಣತೊಡುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕೆಂದು ಲೋಕಾಯುಕ್ತ ಎಸ್ಪಿ ಕೆ. ಪರಶುರಾಮ ಹೇಳಿದರು. ಇಲ್ಲಿನ ಕ್ಲಾಸಿಕ್ ತರಬೇತಿ ಸಂಸ್ಥೆ ಮತ್ತು ಲೋಕಾಯುಕ್ತ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಸಾರ್ವಜನಿಕರ ಪಾತ್ರ ಎಂಬ ವಿಷಯ ಕುರಿತು ನಡೆದ ಭಾಷಣ ಸ್ಪರ್ಧೆಯಲ್ಲಿ ಅವರು ಮಾತನಾಡಿದರು. ಉದ್ಯೋಗ ಗಿಟ್ಟಿಸಿಕೊಳ್ಳಲು ಲಂಚ ನೀಡುವ ಪದ್ಧತಿ ಬೀಡಬೇಕಿದೆ. ಅಲ್ಲದೇ, ಉದ್ಯೋಗ ಪಡೆದ ನಂತರ ಲಂಚ ಸ್ವೀಕರಿಸದೇ ಕಾನೂನು ಬದ್ಧವಾಗಿ ಕಾರ್ವನಿರ್ವಹಿಸಬೇಕು. ಲಂಚ ಸ್ವೀಕರಿಸುವ ಅಧಿಕಾರಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ದೊರೆತಲ್ಲಿ ದೂರು ಸಲ್ಲಿಸಬೇಕೆಂದು ತಿಳಿಸಿದರು. ಭಾಷಣ ಸ್ಪರ್ಧೆಯಲ್ಲಿ ವಿನಯ ಎಸ್.ಎಂ. ಪ್ರಥಮ, ನಂದಾ ಎಂ. ದ್ವೀತಿಯ ಹಾಗೂ ಎನ್.ಜಿ. ಪೊಲೀಸ್ಪಾಟೀಲ ತೃತೀಯ ಸ್ಥಾನ ಪಡೆದರು. ಬಳಿಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕ್ಲಾಸಿಕ್ ಸಂಸ್ಥೆ ನಿರ್ದೇಶಕ ಲಕ್ಷ್ಮಣ ಉಪ್ಪಾರ ಅಧ್ಯಕ್ಷತೆ ವಹಿಸಿದ್ದರು. ಎಚ್.ಡಿ. ಅಂದಾನಿಗೌಡರ, ಡಾ. ಎಂ.ವೈ. ಸಾವಂತ, ಹರ್ಷ ಡಂಬಳ, ಬಸವರಾಜ ಬಂಗಾರಿ, ದಿವ್ಯಶ್ರೀ ಇದ್ದರು.
5ರಿಂದ ವೀರ್ಯಾಣು ಕೊರತೆ ಚಿಕಿತ್ಸೆ ಶಿಬಿರ
ಹುಬ್ಬಳ್ಳಿ: ನಗರದ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ವತಿಯಿಂದ ವೀರ್ಯಾಣು ಕೊರತೆ ಚಿಕಿತ್ಸಾ ಶಿಬಿರವನ್ನು ನ. 5 ರಿಂದ 12ರ ವರೆಗೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ನಡೆಯುವ ಈ ಶಿಬಿರದ ಸದುಪಯೋಗಪಡೆದುಕೊಳ್ಳುವಂತೆ ಮುಖ್ಯ ವೈದ್ಯಾಧಿಕಾರಿ ಡಾ. ಪಿ.ಜಿ. ಸುಬ್ಬನಗೌಡ ಮತ್ತು ಪಂಚಕರ್ಮ ವಿಭಾಗದ ವೈದ್ಯ ಡಾ. ಎ.ಐ. ಸಣಕಲ್ ಕೋರಿದ್ದಾರೆ. ಮಾಹಿತಿಗೆ ಹೆಗ್ಗೇರಿ ಕಾಲೋನಿಯಲ್ಲಿರುವ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಡಾ. ಅಭಿನವ್ ರಾತೋರ್ (ಮೊ: 8892743647) ಅವರನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಪ್ರಧಾನ ಕಾರ್ಯದರ್ಶಿಯಾಗಿ ಶಿವಾನಂದ
ಧಾರವಾಡ: ಇತ್ತೀಚೆಗೆ ನಡೆದ ಬಿಜೆಪಿ ತಾಲೂಕು ಯುವ ಮೋರ್ಚಾ ಸಭೆಯಲ್ಲಿ ತಾಲೂಕಿನ ಯಾದವಾಡ ಗ್ರಾಮದ ಶಿವಾನಂದ ಬೆಂಡಿಗೇರಿ ಅವರನ್ನು ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ ಹಾಗೂ ತಾಲೂಕಾಧ್ಯಕ್ಷ ಮಡಿವಾಳಪ್ಪ ಉಳವಣ್ಣವರ ಆದೇಶದ ಮೇರೆಗೆ ಶಿವಾನಂದ ಬೆಂಡಿಗೇರಿ ಅವರನ್ನು ತಾಲೂಕು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಇವರಿಗೆ ಗ್ರಾಮದ ಚನ್ನಪ್ಪ ಬೆಂಡಿಗೇರಿ, ಮಹಾಂತೇಶ ಹಳ್ಳಿಗೇರಿಮಠ, ಬಸವರಾಜ ಕಡ್ಡೆಪ್ಪನವರ, ನಾಗರಾಜ ಪಾಟೀಲ, ಮೌಲಾಸಾ ಹೆಬ್ಬಳ್ಳಿ, ಸಿದ್ದಪ್ಪ ಗಡಾದ, ಮಹಾಂತೇಶ ವಾಲಿ, ಮಂಜು ಕಮ್ಮಾರ, ಶಂಕಪ್ಪ ಬೇಟಗೇರಿ, ಶಿವಪ್ಪ ಬೆಂಡಿಗೇರಿ ಮತ್ತಿತರು ಅಭಿನಂದನೆ ಸಲ್ಲಿಸಿದ್ದಾರೆ.
ರಾಮಾಯಣ ಮೌಲ್ಯಗಳ ಪ್ರತಿಪಾದಿಸುವ ಕಾವ್ಯ
ಗದಗ: ವಾಲ್ಮೀಕಿ ಬರೆದ ರಾಮಾಯಣ ಮಹಾಕಾವ್ಯ ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುವ ಮಹಾಕಾವ್ಯವಾಗಿದೆ ಎಂದು ಜ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು. ಇತ್ತೀಚಿಗೆ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದ 2143ನೇ ಶಿವಾನುಭವ ಕಾರ್ಯಕ್ರಮದಲ್ಲಿ ಆದಿ ಕವಿ ವಾಲ್ಮೀಕಿ ಮಹರ್ಷಿ ಜಯಂತಿ ನಿಮಿತ್ತ 'ರಾಮಾಯಣ ಒಂದು ಅವಲೋಕನ' ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಉಪನ್ಯಾಸ ನೀಡಿದ ಬದಾಮಿ ವೀರಪುಲಕೇಶಿ ಡಾ. ಪಾರ್ವತಿ ಲೆಂಕೆಣ್ಣವರ ಮಾತನಾಡಿ, ರಾಮಾಯಣದ ತತ್ವಾದರ್ಶಗಳು ಪ್ರಸ್ತುತ. ರಾಮಾಯಣದಲ್ಲಿ ಬರುವ ಪ್ರತಿಯೊಂದು ಸನ್ನಿವೇಶಗಳು ಮಾರ್ಮಿಕವಾಗಿವೆ. ಇಂದಿನ ಯುಗದ ಜೀವನಕ್ಕೂ ಮಾರ್ಗದರ್ಶನ ಮಾಡಬಲ್ಲ ಹಾಗೂ ಪ್ರಸ್ತುತ ನೀತಿ ಬೋಧಿಸಬಲ್ಲ ತತ್ವಾದರ್ಶ ಹೊಂದಿದೆ ಎಂದರು. ಆರೋಗ್ಯವೇ ಭಾಗ್ಯ ಕುರಿತು ಬೆಂಗಳೂರಿನ ವೈದ್ಯೆ ಡಾ. ನಂದಾ ರಜನೀಶ ಉಪನ್ಯಾಸ ನೀಡಿದರು. ಮೃತ್ಯುಂಜಯ ಸಂಕೇಶ್ವರ, ಶಿವಲೀಲಾ ಕುರಡಗಿ, ಪ್ರೊ. ಎಸ್.ಎನ್. ಆದಿ ಪಾಲ್ಗೊಂಡಿದ್ದರು.
6ಕ್ಕೆ ಆಹೋರಾತ್ರಿ ಸಂಗೀತ
ಹಾವೇರಿ: ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ರಾಜ್ಯೋತ್ಸವದ ಅಂಗವಾಗಿ 'ಕಲಾ ಸೌರಭ' ನ. 6ರ ರಾತ್ರಿ 9 ಗಂಟೆಗೆ ಜಿಲ್ಲಾ ಗುರುಭವನದಲ್ಲಿ ಅಹೋರಾತ್ರಿ ಸಾಂಸ್ಕೃತಿಕ ಸಂಗೀತ ಹಮ್ಮಿಕೊಂಡಿದೆ. ಜಾನಪದ ವಿವಿ ಉಪಕುಲಪತಿ ಡಾ ಅಂಬಳಿಕೆ ಹಿರಿಯಣ್ಣ ಉದ್ಘಾಟಿಸಲಿದ್ದಾರೆ. ಹುಕ್ಕೇರಿ ಮಠದ ಶ್ರೀ ಸದಾಶಿವ ಶ್ರೀಗಳು, ಹೊಸಮಠದ ಬಸವಶಾಂತಲಿಂಗ ಶ್ರೀಗಳು, ಹರಸೂರು ಬಣ್ಣದಮಠದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶ್ರೀಗಳ ಆಗಮಿಸಲಿದ್ದು, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನಿಂಗಪ್ಪ ಚಾವಡಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ 9.30ರಿಂದ 'ಕಲಾ ಸೌರಭ'ದಲ್ಲಿ ಬಾಲ ಕಲಾವಿದರಾದ ಪ್ರಿಯಂಕಾ ಕಾಶೆಟ್ಟಿ, ಸಂಜನಾ ಜೋಶಿ, ವಿದ್ಯಾ ನರಗುಂದ, ದಿವ್ಯಾ ನಾಯ್ಕ ಭರತ ನಾಟ್ಯ ಪ್ರದರ್ಶಿಸಲಿದ್ದಾರೆ. ಪಂ. ಶ್ರೀನಿವಾಸ ಜೋಶಿ (ಸಿತಾರ್), ಶಿಗ್ಗಾಂವಿಯ ಹನುಮಂತಪ್ಪ ಕಾಮನಹಳ್ಳಿ (ವಯೋಲಿನ್), ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಂ. ಬಸವರಾಜ ಭಜಂತ್ರಿ ಹೆಡ್ಡಿಗೊಂಡ (ಶಹನಾಯಿ) ಹಾಗೂ ಹುಬ್ಬಳಿಯ ಆದಿತ್ಯ ಕುಲಕರ್ಣಿ (ಕೊಳಲು) ವಾದ್ಯ ಸಂಗೀತ ಪ್ರಸ್ತುತಪಡಿಸುವರು. ಧಾರವಾಡದ ಪಂ. ಬಾಲಚಂದ್ರ ನಾಕೋಡ, ಹುಬ್ಬಳ್ಳಿಯ ರೇಖಾ ಹೆಗಡೆ, ಆಕಾಶವಾಣಿ ಕಲಾವಿದೆ ಹಾವೇರಿಯ ಭಾಗ್ಯವತಿ ಕೋಡಬಾಳ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸುವರು. ಗದುಗಿನ ಶಹಜಾನ ಮುದಕವಿ ಮತ್ತು ತಂಡ ಜಾನಪದ ನೃತ್ಯ ಕಾರ್ಯಕ್ರಮ ನಡೆಸಿಕೊಡಲಿದೆ. ಪೃಥ್ವಿ ಶಿರೂರ ನೃತ್ಯ ಹಾಗೂ ಜ್ಯೂ. ರಾಜಕುಮಾರ್ ತಂಡದಿಂದ ರಸಮಂಜರಿ ಇದೆ ಎಂದು ಸಂಘದ ಕಾರ್ಯದರ್ಶಿ ಪರಶುರಾಮ ಅಗಡಿ, ರಾಷ್ಟ್ರೀಯ ಮಂಡಳಿ ಸದಸ್ಯ ವಿಜಯ್ ಹೂಗಾರ, ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ರಾಮು ಮುದಿಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.