ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಉತ್ತಂಗಿ ಚನ್ನಪ್ಪ ಜನ್ಮ ದಿನೋತ್ಸವ

Vishwanath S
Updated On : 5 Nov 2013, 11:29 am

ಧಾರವಾಡ: ಸರ್ವಜ್ಞ ಸಾಹಿತಿ ರೆವರೆಂಡ್ ಉತ್ತಂಗಿ ಚನ್ನಪ್ಪ ಅವರ 133ನೇ ಜನ್ಮ ದಿನೋತ್ಸವ ಕಾರ್ಯಕ್ರಮ ಇಲ್ಲಿನ ಹೆಬಿಕ್ ಚರ್ಚ್‌ನಲ್ಲಿ ಇತ್ತೀಚೆಗೆ ನಡೆಯಿತು.
ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿರುವ ಅವರ ಕುಟುಂಬದ ಸದಸ್ಯರೂ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಉತ್ತಂಗಿ ಚನ್ನಪ್ಪನವರ ಜೀವನ ಮತ್ತು ಸಾಹಿತ್ಯ ಕೃತಿಗಳ ಸ್ಮರಣೆ ನಡೆಯಿತು. ಗ್ರಂಥಾಲಯ ವಿಜ್ಞಾನಿ ಡಾ. ಎಸ್.ಆರ್. ಗುಂಜಾಳ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ತಾವು ಉತ್ತಂಗಿ ಚನ್ನಪ್ಪ ಅವರೊಂದಿಗೆ ಹೊಂದಿದ್ದ ಒಡನಾಟದ ದಿನಗಳನ್ನು ಸ್ಮರಿಸಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ರೆ. ಎಸ್.ಎಸ್. ಸಕ್ಕರಿ, ಉತ್ತಂಗಿಯವರ ಆದರ್ಶಪೂರ್ಣ ಉಪದೇಶ ಪದ್ಧತಿಯನ್ನು ನೆನಪಿಸಿಕೊಂಡು ಹೃದಯಂಗಮವಾಗಿ ಸಭೆಯಲ್ಲಿ ವಿವರಿಸಿದರು. ಇದೇ ಸಂದರ್ಭ ಉತ್ತಂಗಿಯವರ ಜೀವನ ದರ್ಶನ ಮೂಡಿಸುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಡಾ. ಎಸ್.ಆರ್. ಗುಂಜಾಳರು ಬರೆದ ಕ್ರಿಸ್ತ ಶತಕ ಪುಸ್ತಕವನ್ನು ರೆ. ಎಸ್.ಎಸ್. ಸಕ್ಕರಿ ಅವರು ಬಿಡುಗಡೆ ಮಾಡಿದರು.
ರೆ. ಡೆರಿಕ್, ಡಾ. ಜೇಮ್ಸ್ ಉತ್ತಂಗಿ, ಸುಬ್ಬಕ್ಕ, ಸಂಜಯ ತಟಪಟ್ಟಿ, ಪ್ರಿನ್ಸ್ ದೇವಧರ್, ಅನಿಲ ದೇವಧರ್, ಮೋಹನ ಬಾರಾಟಕ್ಕೆ, ಶಾಮಸುಂದರ ದೇವಧರ, ಮಾರ್ಗರೆಟ್ ಪ್ರಭಾಕರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement