ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಆಹಾರ ಸುರಕ್ಷತಾ ಕಾಯ್ದೆ ಕಟ್ಟುನಿಟ್ಟಾಗಿ ಪಾಲಿಸಿ: ಎಚ್ಚರಿಕೆ

Vishwanath S
Updated On : 7 Nov 2013, 11:17 am

ಧಾರವಾಡ: 2011ರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಸೇರಿಸಿರುವ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಲಾಖೆಯ ಅಂಕಿತ ಅಧಿಕಾರಿ ಡಾ.ಎಸ್.ಎಂ. ಹೊನಕೇರಿ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.
ಭಾರತ ಸರ್ಕಾರದಿಂದ ಈ ಕಾಯ್ದೆ ಜಾರಿಯಾಗಿದ್ದು, ಜಿಲ್ಲೆಯ ಎಲ್ಲ ಆಹಾರ ತಯಾರಿಕಾ ಘಟಕಗಳು, ಪ್ಯಾಕರ್ಸ್, ಎಲ್ಲ ರೀತಿಯ ಹೋಟೆಲ್, ರೆಸ್ಟೋರೆಂಟ್‌ಗಳು, ಕ್ಯಾಂಟಿನ್ ಹಾಗೂ ಇತರೆ ಆಹಾರ ಸಂಸ್ಕರಣಾ ಘಟಕಗಳು ಕಡ್ಡಾಯವಾಗಿ ಕಾಯ್ದೆ ಪ್ರಕಾರ ನೋಂದಣಿ ಹಾಗೂ ಇಲಾಖೆಯಿಂದ ಪರವಾನಗಿ ಪಡೆಯಬೇಕು. 12 ಲಕ್ಷದೊಳಗಿನ ಆದಾಯ ಹೊಂದಿರುವ ಘಟಕಗಳು ವಾರ್ಷಿಕ ರು. 100 ಶುಲ್ಕ ತುಂಬಿ ನೋಂದಣಿ ಮಾತ್ರ ಮಾಡಿಸಿಕೊಳ್ಳಬೇಕು. ಹಾಗೆಯೇ, 12 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಘಟಕಗಳು ವಾರ್ಷಿಕ ರು. 2 ಸಾವಿರ ತುಂಬಿ ಪರವಾನಗಿ ಪಡೆಯಬೇಕು. ಐದು ವರ್ಷದ ನೋಂದಣಿ ಹಾಗೂ ಪರವಾನಗಿಯನ್ನೂ ಪಡೆಯಬಹುದು. ಈಗಾಗಲೇ ಪರವಾನಗಿ ಪಡೆದಿರುವ ಘಟಕಗಳು ನವೀಕರಣ ಮಾಡಿಸಿಕೊಳ್ಳಬೇಕು. ಒಂದು ವೇಳೆ ನೋಂದಣಿ ಅಥವಾ ಪರವಾನಗಿ ಪಡೆಯದಿರುವ ಹೋಟೆಲ್, ಕ್ಯಾಂಟಿನ ಹಾಗೂ ಇನ್ನಿತರೆ ಘಟಕಗಳ ಮೇಲೆ ತತ್‌ಕ್ಷಣ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುವುದು. ಅಲ್ಲದೆ, ದಂಡ ಸಹ ಹಾಕಲು ಕಾಯ್ದೆಯಲ್ಲಿ ಅವಕಾಶವಿದ್ದು, ಹೆಚ್ಚಿನ ಮಾಹಿತಿಗೆ ಮೊ: 94498 43079 ಅಥವಾ 8277511257 ಸಂಪರ್ಕಿಸಬಹುದೆಂದು ಡಾ.ಎಸ್.ಎಂ. ಹೊನಕೇರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement