ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಹೈ ತಡೆ

Vishwanath S
Updated On : 9 Nov 2013, 12:35 pm

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 41ನೇ ವಾರ್ಡ್‌ನಿಂದ ಬಿಜೆಪಿ ಸದಸ್ಯರಾಗಿ ಚುನಾಯಿತಗೊಂಡಿದ್ದ ಲಕ್ಷ್ಮಣ ಗಂಡಗಾಳೇಕರ ಆಯ್ಕೆ ಪ್ರಶ್ನಿಸಿ ಹುಬ್ಬಳ್ಳಿಯ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಗಂಡಗಾಳೇಕರ ಪರ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ವಾದ ಮಂಡಿಸಿದ ನ್ಯಾಯವಾದಿ ಅರುಣ ಜೋಶಿ ಮತ್ತು ವಿದ್ಯಾಶಂಕರ ದಳವಾಯಿ ಅವರು ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಚುನಾವಣಾ ತಕರಾರು ಅರ್ಜಿಯಲ್ಲಿ ಇರುವ ಲೋಪಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಚುನಾಯಿತ ಅಭ್ಯರ್ಥಿ ವಿರುದ್ಧದ ಪ್ರಕರಣಕ್ಕೆ ತಜೆಯಾಜ್ಞೆ ನೀಡುವಂತೆ ಕೋರಿದಾಗ ಚುನಾವಣಾ ತಕರಾರು ಅರ್ಜಿಯ ಪರವಾಗಿ ನ್ಯಾಯವಾದಿಗಳಾದ ಎಫ್.ಬಿ. ಪಾಟೀಲ ಮತ್ತು ಪಿ.ಎಸ್. ಉಡಕೇರಿ ವಾದ ಮಂಡಿಸಿ, ತಡೆಯಾಜ್ಞೆ ನೀಡದಂತೆ ವಿನಂತಿಸಿದರು.
ಉಭಯ ಕಕ್ಷಿಗಾರರ ಪರ ನ್ಯಾಯವಾದಿಗಳ ವಾದ ಆಲಿಸಿದ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ, ಹುಬ್ಬಳ್ಳಿಯ 1ನೇ ಅಧಿಕ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ಚುನಾವಣಾ ತಕರಾರು ಅರ್ಜಿ ಸಂಖ್ಯೆ 6/13ರ ವಿಚಾರಣೆಗೆ ತಡೆಯಾಜ್ಞೆ ನೀಡಿ, ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement