ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಖೊಟ್ಟಿ ದಾಖಲೆ: ಪತ್ನಿ ವಿರುದ್ಧ ಪತಿ ದೂರು

Lingaraj Badiger
Updated On : 12 Nov 2013, 11:13 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 11
ಖೊಟ್ಟಿ ಜನನ ಪ್ರಮಾಣ ಪತ್ರ ಮತ್ತು ನಕಲಿ ದಾಖಲೆಗಳನ್ನು ನೀಡುವ ಮೂಲಕ ರಮಾದೇವಿ ಎನ್ನುವವರು ಏರ್ ಇಂಡಿಯಾದಲ್ಲಿ ಏರ್ ಹೊಸ್ಟೆಸ್ ನೌಕರಿ ಪಡೆದಿದ್ದು, ಈ ಅಕ್ರಮದ ವಿರುದ್ಧ ಹುಬ್ಬಳ್ಳಿಯ ಕೋರ್ಟ್‌ಗೆ ಮೊರೆ ಹೋಗಿದ್ದೇನೆ ಎಂದು ರಮಾದೇವಿ ಅವರ ಪತಿ ಡೇರಿಕ್ ಸೋನ್ಸ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕರಿ ಗಿಟ್ಟಿಸುವ ನಿಟ್ಟಿನಲ್ಲಿ ತಮ್ಮ ಪತ್ನಿ ಎಸಗಿರುವ ಅಕ್ರಮ ಕಳೆದ ಫೆಬ್ರವರಿಯಲ್ಲಿ ಬೆಳಕಿಗೆ ಬಂದಿದೆ.
ಅನ್ಯಾಯದ ವಿರುದ್ಧ ಪ್ರತಿಭಟಿಸಿ ಅಂದಿನಿಂದ ಅವರೊಂದಿಗೆ ನಾನು ಒಟ್ಟಿಗೆ ವಾಸಿಸುತ್ತಿಲ್ಲ. 1983ರಲ್ಲಿ ಏರ್ ಇಂಡಿಯಾದಲ್ಲಿ ಗಗನಸಖಿ ನೌಕರಿ ಪಡೆಯುವುದಕ್ಕೆ ನಕಲಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಸಲ್ಲಿಸಿರುವ ಸಂಗತಿ ಪಾಸ್‌ಪೋರ್ಟ್ ನವೀಕರಣ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ನವೆಂಬರ್ 1955ರಲ್ಲಿ ಜನಿಸಿರುವ ರಮಾದೇವಿ ಅವರು ಗಗನಸಖಿ ನೌಕರಿ ಗಿಟ್ಟಿಸುವುದಕ್ಕೆ ಕೋರ್ಟ್ ಅಫಿಡೇವಿಟ್‌ನಲ್ಲಿ 1958 ಎಂದು ಘೋಷಿಸಿಕೊಂಡಿದ್ದಾರೆ. ಏರ್ ಇಂಡಿಯಾ ಅರ್ಜಿ ಕರೆದಿದ್ದ ವೇಳೆ ನಿಗದಿತ ವಯಸ್ಸು ಮೀರಿದ್ದ ನನ್ನ ಪತ್ನಿ ನಕಲಿ ದಾಖಲೆ ಸೃಷ್ಟಿಸಿ ನೌಕರಿ ಪಡೆದುಕೊಂಡಿದ್ದು ಅಲ್ಲದೇ ಅರ್ಹ ಅಭ್ಯರ್ಥಿಗೆ ಅನ್ಯಾಯ ಎಸಗಿದ್ದು, ಇದರ ವಿರುದ್ಧ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದೇನೆ.
ನಕಲಿ ಎಸ್ಸೆಸ್ಸೆಲ್ಸಿ ಪ್ರಮಾಣಪತ್ರ ಮತ್ತು ಕೋರ್ಟ್ ಅಫಿಡೇವಿಟ್‌ನಲ್ಲಿ ರಮಾದೇವಿ ಅವರು, ತಂದೆಯ ಹೆಸರನ್ನು ಕೂಡ ತಿದ್ದುಪಡಿ ಮಾಡಿದ್ದಾರೆ.
ಹುಬ್ಬಳ್ಳಿಯ ವಿವಿಧ ಶಾಲೆಗಳಲ್ಲಿರುವ ದಾಖಲೆಗಳ ಪ್ರಕಾರ ಅವರ ತಂದೆಯ ಹೆಸರು ಓ. ವೆಂಕಟಸ್ವಾಮಿ ಆದರೆ, ರಮಾದೇವಿ ನಕಲಿ ಪ್ರಮಾಣ ಪತ್ರದಲ್ಲಿ ವೆಂಕಟಯ್ಯ ಎಂದು ತೋರಿಸಿದ್ದಾರೆ.
1988ರಲ್ಲಿ ಪ್ರೇಮ ವಿವಾಹವಾಗಿರುವ ನಮಗೆ ಈಗಾಗಲೇ 22 ವರ್ಷದ ಮಗಳಿದ್ದು, ಮುಂಬೈನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಮಗಳಿಗೂ ಕೂಡ ನಮ್ಮಿಬ್ಬರ ಮಧ್ಯೆ ಉದ್ಭವಿಸಿರುವ ಸಮಸ್ಯೆ ಕುರಿತು ಮಾಹಿತಿ ಇದೆ ಎಂದು ಡೆರಿಕ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement