ಶಾದಿಭಾಗ್ಯ ಯೋಜನೆ ವಿಸ್ತರಿಸಿ: ಕೆಜೆಪಿ
ಧಾರವಾಡ: ಮಾಜಿ ಮುಖ್ಯಮಂತ್ರಿ ಕೆಜೆಪಿ ಧುರೀಣ ಬಿ.ಎಸ್. ಯಡಿಯೂರಪ್ಪ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಬೆಂಬಲ ವ್ಯಕ್ತಪಡಿಸಿ ಕೆಜೆಪಿ ಗ್ರಾಮಾಂತರ ಮತ್ತು ಶಹರ ಘಟಕದ ಕಾರ್ಯಕರ್ತರು ಸೋಮವಾರ ಇಲ್ಲಿನ ತಹಸೀಲ್ದಾರ್ ಕಚೇರಿ ಹತ್ತಿರ ಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು. ಇದೇ ಸಂದರ್ಭ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಕೆಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಗೋಖಲೆ, ಶಹರ ಅಧ್ಯಕ್ಷ ರಾಜಶೇಖರ ಮೂಗಿ, ಗ್ರಾಮಾಂತರ ಅಧ್ಯಕ್ಷ ಎಸ್.ಆರ್. ರಾಮನಗೌಡರ, ಅಶೋಕ ನಿಡವಣಿ, ಕಸ್ತೂರಿ ಕುಸುಗಲ್, ಚನ್ನವ್ವ ಬಾಳಪ್ಪನವರ, ರೇಣುಕಾ ಗುಳುನಕೊಪ್ಪ, ಸವಿತಾ ಕಲಬುರ್ಗಿ, ಸುಧೀರ ಕ್ಷತ್ರಿ ಇದ್ದರು.
--