ಕುಂದಗೋಳ: ಬಿಜೆಪಿ ಬೈಕ್ ರ್ಯಾಲಿ
ಕುಂದಗೋಳ: ಬೆಂಗಳೂರಿನಲ್ಲಿ ನಡೆಯುವ ನರೇಂದ್ರ ಮೋದಿಯವರ 'ಭಾರತ ಗೆಲ್ಲಿಸಿ' ಕಾರ್ಯಕ್ರಮದ ಪ್ರಚಾರಾರ್ಥ ಪಟ್ಟಣದಲ್ಲಿ ಬುಧವಾರ ಶ್ರೀ ಗಾಳಿಮರೆಮ್ಮ ದೇವಸ್ಥಾನದಿಂದ ಬೈಕ್ ರ್ಯಾಲಿ ಜರುಗಿತು.
ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕ ಅಧ್ಯಕ್ಷ ಎಂ.ಆರ್. ಪಾಟೀಲ್, ರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮರೆತು ದೇಶ್ನ ಲೂಟಿ ಹೊಡೆಯುವಲ್ಲಿ ತೊಡಗಿದೆ. ದೇಶದ ಭವಿಷ್ಯದ ಅಭಿವೃದ್ಧಿಗೆ ನರೇಂದ್ರ ಮೋದಿ ಅವರ ನಾಯಕತ್ವ ಬೇಕು. ಯುಪಿಎ ಆಡಳಿತದ ಧೋರಣೆಗೆ ಬೇಸತ್ತ ಪ್ರಜೆಗಳ ಮೋದಿಯವರನ್ನ್ನು ಪ್ರಧಾನಿ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
200ಕ್ಕೂ ಹೆಚ್ಚು ತಾಲೂಕು ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಕುಂದಗೋಳದಿಂದ ಬೇನಕನಹಳ್ಳಿ, ಶಿರೂರ, ಸಂಶಿ, ಪಶುಪತಿಹಾಳ, ಗುಡಗೇರಿ, ತರ್ಲಘಟ್ಟ ಹೀಗೆ ತಾಲೂಕಾದ್ಯಂತ ಸಂಚರಿಸಿ, ನರೇಂದ್ರ ಮೋದಿ ಅವರಿಗೆ ಜಯ ಘೋಷ ಹಾಕಿದರು. ದೇಶಕ್ಕೆ ಅಭಿವೃದ್ಧಿ ಪರ್ವ ಬರಲಿ ಎಂದು ಹಾರೈಸುತ್ತ ಸಂಚರಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಎನ್.ಎನ್. ಪಾಟೀಲ, ಪಪಂ ಸದಸ್ಯ ವಿಠ್ಠಲ ಚವ್ಹಾಣ, ವಿಜಯ ನಾಡಜೋಶಿ, ಪ್ರದೀಪ ಕುಲಕರ್ಣಿ, ದಾನಪ್ಪ ಗಂಗಾಯಿ, ಸತೀಶ ಕೊಬ್ಬಯ್ಯನವರ, ಮಾಲತೇಶ ಶ್ಯಾಗೋಟಿ, ಸತೀಶ ಪಾಟೀಲ್, ಪ್ರಕಾಶ ಗೌಡ ಪಾಟೀಲ್, ಮುತ್ತು ಮೂಲಿಮನಿ, ಅಖಂಡಪ್ಪ ಕಳಸೂರ, ಟಿ.ಕೆ. ಕುಲಕರ್ಣಿ ಹಾಗೂ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.