ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಾಳೆಯಿಂದ ಮಕ್ಕಳ ಸಹಾಯವಾಣಿ ಸಪ್ತಾಹ

Lingaraj Badiger
Updated On : 14 Nov 2013, 11:15 am

ಹುಬ್ಬಳ್ಳಿ: ಚೈಲ್ಡ್‌ಲೈನ್ ಇಂಡಿಯಾ ಫೌಂಡೇಶನ್ ವತಿಯಿಂದ ಧಾರವಾಡ ಜಿಲ್ಲೆಯಲ್ಲಿ ನ. 15ರಿಂದ 20ರ ವರೆಗೆ 'ಮಕ್ಕಳ ಸಹಾಯವಾಣಿ (1098)' ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ಮಕ್ಕಳ ರಕ್ಷಣೆ ಕುರಿತು ಮಾಹಿತಿ ನೀಡುವುದು ಈ ಸಪ್ತಾಹದ ಪ್ರಮುಖ ಉದ್ದೇಶ ಎಂದು ಫೌಂಡೇಶನ್ ಜಿಲ್ಲಾ ಸಂಯೋಜಕ ಬಸವರಾಜ ಬಗಡಗೇರಿ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಕಷ್ಟದಲ್ಲಿರುವ ಮಕ್ಕಳಿಗೆ ಫೌಂಡೇಶನ್ ಬೆಂಬಲ ಹಾಗೂ ಸಹಾಯ ಮಾಡುತ್ತ ಬಂದಿದೆ. ನ. 15ರಂದು ಬೆಳಗ್ಗೆ 10ಕ್ಕೆ ನಗರದ ಹಳೇ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಗ್ರಾಮೀಣ ಹಾಗೂ ಶಹರ ಮಟ್ಟದ ಜನತೆಗೆ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಜೊತೆಗೆ ಮಕ್ಕಳ ಸಹಾಯವಾಣಿ ಬಗ್ಗೆಯೂ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಮಕ್ಕಳ ಸಹಾಯವಾಣಿ (1098) ಮೂಲಕ 2012ರ ಏಪ್ರಿಲ್‌ನಿಂದ 2013ರ ಅಕ್ಟೋಬರ್ ವರೆಗೆ ಧಾರವಾಡ ಜಿಲ್ಲೆಯ 553 ಮಕ್ಕಳಿಗೆ ಸಹಾಯ ಮಾಡಲಾಗಿದೆ. ಇವರಲ್ಲಿ 24 ಮಕ್ಕಳು ಮನೆಯಿಂದ ಕಳೆದುಕೊಂಡವರು, ಇಬ್ಬರು ಮಾದಕ ವ್ಯಸನಿಗಳು, ಇಬ್ಬರು ಬಾಲ ಕಾರ್ಮಿಕರು, ಒಬ್ಬ ಮಕ್ಕಳ ಸಾಗಾಣಿಕೆಯಿಂದ, ಮೂವರು ಅಸಹಜ ಮಕ್ಕಳು, ನಾಲ್ವರು ಮಾನಸಿಕ ಹಾಗೂ ದೈಹಿಕ ವಿಕಲಚೇತನರು, ಮೂವರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು, ಬಾಲ್ಯ ವಿವಾಹಕ್ಕೊಳಗಾಗುತ್ತಿದ್ದ 16 ಮಕ್ಕಳು ಸೇರಿದ್ದಾರೆ. ಅಧಿಕ ಬಡತನ ಇರುವ ಕಲಘಟಗಿ ತಾಲೂಕಿನಲ್ಲಿ ಬಾಲ್ಯ ವಿವಾಹಕ್ಕೊಳಗಾಗುತ್ತಿರುವ ಹೆಚ್ಚಿನ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಹೇಳಿದರು. ಸಪ್ತಾಹ ಅಂಗವಾಗಿ ಜಿಲ್ಲಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮಕ್ಕಳ ಹಕ್ಕುಗಳ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಲಾಗುವುದು ಎಂದರು. ಬಿ.ವೈ. ಪಾಟೀಲ, ಎನ್.ಬಿ. ಹೊಸಮನಿ ಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement