ಅಹಿಂದ ಶೈಕ್ಷಣಿಕ ಪ್ರವಾಸ: ಅಭಿಪ್ರಾಯಗಳು
ನಾವೆಲ್ಲರೂ ಒಂದೇ ಎಂಬ ಭಾವನೇ ಇರುವ ನಮಗೆ ಸರ್ಕಾರದ ಜಾತಿ ಆಧಾರಿತ ಪ್ರವಾಸ ಬೇಡ. ಈ ಯೋಜನೆಯಿಂದ ನಾನು ಆ ಜಾತಿ, ನೀನು ಈ ಜಾತಿ ಎಂದು ಮಾತನಾಡಿಕೊಳ್ಳುವಂತಾಗಿದೆ. ಪ್ರವಾಸ ಎಲ್ಲ ಮಕ್ಕಳು ಒಟ್ಟಾಗಿ ಕೈಗೊಳ್ಳುವಂತಾಗಬೇಕು. ಇದರಿಂದ ನಮ್ಮನಮ್ಮಲ್ಲಿ ಭಿನ್ನಾಭಿಪ್ರಾಯಗಳು ಮೂಡುವುದಿಲ್ಲ.
- ಮಹೇಶ ಕಾಮನಕೇರಿ (10ನೇ ತರಗತಿ ವಿದ್ಯಾರ್ಥಿ, ಧಾರವಾಡ)
ಈ ಯೋಜನೆಯ ಮೂಲಕ ನಮ್ಮನ್ನು ಪ್ರವಾಸಕ್ಕೆ ಕರೆದ್ಯೊಯುತ್ತಿರುವುದು ಸಂತಸ ವಿಷಯವೇ ಸರಿ. ಆದರೆ, ಈ ರೀತಿ ಮಕ್ಕಳಲ್ಲಿ ಜಾತಿ ಮಾಡುವುದು ಸರಿಯಲ್ಲ. ಜಾತಿ ಹೆಸರಲ್ಲಿ ಪ್ರವಾಸ ಕೆಲವೇ ವಿದ್ಯಾರ್ಥಿಗಳಿಗೆ ಸೀಮಿತವಾಗಬಾರದು. ಇದರಿಂದ ನಮ್ಮ ನಮ್ಮಲ್ಲಿಯೇ ಭೇದ-ಭಾವ ಬೆಳೆಸುವುದು ಸರಿಯಲ್ಲ.
- ರೋಹಿತ ತೋಟದ(8ನೇ ತರಗತಿ ವಿದ್ಯಾರ್ಥಿ, ಧಾರವಾಡ)
ಶೈಕ್ಷಣಿಕ ಪ್ರವಾಸ ಎಂದರೆ, ಯಾರುತಾನೇ ಒಲ್ಲೇ ಅಂದಾರು. ಈ ಯೋಜನೆ ನನಗೆ ಅನ್ವಯಯಾಗುತ್ತದೆ. ಆದರೆ, ಊಟ, ಪಾಠಗಳನ್ನು ಸೇರಿಯೇ ಮಾಡುವ ನನ್ನ ಗೆಳೆಯರನ್ನು ಬಿಟ್ಟು ಹೋಗಲು ಮನಸ್ಸಾಗುವುದಿಲ್ಲ. ಸರ್ಕಾರ ಏನಾದರೂ ಈ ಯೋಜನೆಗೆ ಎಲ್ಲ ಮಕ್ಕಳನ್ನು ಒಳಪಡಿಸಿದರೇ ಮಾತ್ರ ನಾನು ಪ್ರವಾಸ ಮಾಡುತ್ತೇನೆ. ಇಲ್ಲದಿದ್ದರೆ ಪ್ರವಾಸಕ್ಕೆ ನಾನು ಹೋಗೋದಿಲ್ಲ.
- ಸಚಿನ ಚೌವ್ಹಾಣ(8ನೇ ತರಗತಿ ವಿದ್ಯಾರ್ಥಿ, ಧಾರವಾಡ)
ವಿವಿಧತೆಯಲ್ಲಿ ಏಕತೆಯಿಂದ ಬಾಳುವ ಭಾರತದಲ್ಲಿ ಜಾತಿವಾರು ಯೋಜನೆ ಸಲ್ಲದು. ಹಿಂದುಳಿದ ವರ್ಗದ ಅಭಿವೃದ್ಧಿ ಮಾಡಬಯಸುವ ಸರ್ಕಾರ ಬೇರೊಂದು ಹಂತದಲ್ಲಿ ಮಾಡಲಿ. ಮಕ್ಕಳ ವಿಷಯದಲ್ಲಿ ಮಾತ್ರ ಏಕ ರೂಪ ಜಾರಿಯಾಗಬೇಕು.
- ವಿನಾಯಕ ಶಿಗ್ಗಾಂವಿ(9ನೇ ತರಗತಿ ವಿದ್ಯಾರ್ಥಿ, ಧಾರವಾಡ)
ಎಲ್ಲರೂ ಒಂದೇ ಎನ್ನುವ ಶಾಲೆಯಲ್ಲಿ ಶೈಕ್ಷಣಿಕ ಪ್ರವಾಸ ಕೆಲ ಜಾತಿಗಳಿಗೆ ಸೀಮಿತಗೊಂಡಿರುವುದು ವಿಷಾದನೀಯ. ಎಲ್ಲ ವಿದ್ಯಾರ್ಥಿಗಳಿಗೂ ಪ್ರವಾಸಕ್ಕೆ ಹೋಗಬೇಕೆಂಬ ಆಶಯವಿರುತ್ತದೆ. ಒಟ್ಟಾರೆ, ಈ ಯೋಜನೆ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಬಳಿದಂತಿದೆ.
- ಸ್ವಾತಿ ಕಾಂಬಳೆ(10ನೇ ತರಗತಿ ವಿದ್ಯಾರ್ಥಿ, ಧಾರವಾಡ)