ಕಲಘಟಗಿ: ಮೊಹರಂ ಆಚರಣೆ
ಕಲಘಟಗಿ: ಪಟ್ಟಣದ ರುಶ್ತುಂ ಶಹೀದ್ ಅರಬ್ಬಿ ಮದರಸಾ ವಠಾರದಲ್ಲಿ ನೌಜವಾನೆ ಅಹಲೆ ಸುನ್ನತ್‌ವಲ್ ಜಮಾತ್ ವತಿಯಿಂದ ಮೊಹರಂ ಆಚರಿಸಲಾಯಿತು. ಸ್ಥಳೀಯ ನೂರಾನಿ ಮಸೀದಿಯ ಮೌಲಾನಾ ಅಬ್ದುಲ್ ಅಜೀಜ್ ಖತಿಬ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಅಂಚಟಗೇರಿಯ ನಜಮಿಲ್ ಉಲೂಂ ಪ್ರಿನ್ಸಿಪಾಲ್ ಮೌಲಾನಾ ಮುಫ್ತಿ ಸಲ್ಮಾನ ಝಹರಿ, ಮೌಲಾನಾ ಗುಲಾರಿ ರಬ್ಬಾನೆನಜಮಿ, ಸಿದ್ದಕಿ ಅಲಮಾನಿ, ಅಲಕಾಮಿಲ್ ಶಕಾಫಿ, ರಸ್ತುಂ ಶಹೀದ ಅರಬಿ, ಅಬ್ದುಲ್ ಅಜೀಜ್ ಖತಿಬ ಮುಂತಾದವರು ಮಾತನಾಡಿದರು. ಮೌಲಾನಾ ಹನೀಫ್, ಮೌಲಾನಾ ಅಲತಾಫ್, ಮೌಲಾನಾ ರಜ್ವಿ, ಮೌಲಾನಾ ಬಾಕವಿ ಹಾಗೂ ಅಂಜುಮನ್ ಸಂಸ್ಥೆ ಅಧ್ಯಕ್ಷ, ಸದಸ್ಯರು ಪಾಲ್ಗೊಂಡಿದ್ದರು.