ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹಿಂಬಾಗಿಲುಗ್ರಿಲ್‌ಮುರಿದುಮನೆಗಳ್ಳತನ

Lingaraj Badiger
Updated On : 18 Nov 2013, 10:45 am

ಹುಬ್ಬಳ್ಳಿ: ಕೇಶ್ವಾಪುರದ ಅಪಾರ್ಟ್‌ಮೆಂಟ್ ಒಂದರ ಹಿಂಬಾಗಿಲ ಗ್ರಿಲ್ ಮುರಿದ ಕಳ್ಳರು ಮನೆಯೊಳಗಿದ್ದ ಎರಡು ಮೊಬೈಲ್, ರು. 14 ಸಾವಿರ ನಗದು ದೋಚಿ ಪರಾರಿಯಾಗಿರುವ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೇಶ್ವಾಪುರದ ಗಿರಿಯಾಸ್ ಮಳಿಗೆ ಎದುರಿನ ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ ನಡೆದಿದೆ. ಕೃಷ್ಣಮೂರ್ತಿ ಮಗದೂರ ಎನ್ನುವವರ ಪ್ಲ್ಯಾಟ್‌ನ ಹಿಂದಿನ ಗ್ರಿಲ್‌ಗಳನ್ನು ಮುರಿದು ಒಳನುಗ್ಗಿದ ಕಳ್ಳರು ವ್ಯಾನಿಟಿ ಬ್ಯಾಗ್‌ನಲ್ಲಿ ಇರಿಸಿದ್ದ ರು. 28 ಸಾವಿರ ಮೌಲ್ಯದ ಎರಡು ಮೊಬೈಲ್ ಮತ್ತು ರು. 14 ಸಾವಿರ ನಗದು ದೊಚಿದ್ದಾರೆ.  ಘಟನಾ ಸ್ಥಳಕ್ಕೆ ಉಪನಗರ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ಚಲವಾದಿ, ಪಿಎಸ್‌ಐ ಬಸವರಾಜ ಬುದ್ನಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement