ಅತ್ಯುತ್ತಮ ವೀಡಿಯೋ ಪ್ರಶಸ್ತಿ
ಹುಬ್ಬಳ್ಳಿ: ಕರ್ನಾಟಕ ವೈದ್ಯ ವಿಜ್ಞಾನ ಸಂಸ್ಥೆಯ ನೇತ್ರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸತೀಶ ಶೆಟ್ ಅವರು ಪ್ರಸ್ತುತಪಡಿಸಿದ ನೇತ್ರ ಚಿಕಿತ್ಸೆ ಕುರಿತು ಸಿದ್ಧಪಡಿಸಿದ ವೀಡಿಯೋ ಪ್ರಾತ್ಯಕ್ಷಿಕೆಗೆ ಅತ್ಯುತ್ತಮ ವೀಡಿಯೋ ಪ್ರಶಸ್ತಿ ಲಭಿಸಿದೆ.
ಹಾಸನದಲ್ಲಿ ಈಚೆಗೆ ಜರುಗಿದ ರಾಜ್ಯಮಟ್ಟದ 32ನೇ ನೇತ್ರವಿಜ್ಞಾನ ವಿಚಾರ ಸಂಕಿರಣದಲ್ಲಿ ಎಪಿಥೇಲ್‌ನಲ್ಲಿ ದೋಷ ಮತ್ತು ಕಾರ್ನಿಯಲ್ ಅಲ್ಸರ್‌ಗಳನ್ನು ಗುಣಪಡಿಸುವುದಕ್ಕೆ ಅನುಸರಿಸಿದ ಅಂಟಿರಿಯರ್ ಲೆನ್ಸ್ ಕ್ಯಾಪ್ಸೂಲ್‌ನ ಕಸಿ ಮಾಡುವಿಕೆ ವಿಧಾನವು ಅಮಿನೋಟಿಕ್ ಮೆಂಬ್ರೆನ್ ಕಸಿ ಚಿಕಿತ್ಸಾ ಪದ್ಧತಿಗೆ ಪರ್ಯಾಯವಾಗಿದ್ದು, ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ವೇಳೆ ಬಿಸಾಡುವ ಜೀವಕೋಶಗಳಿಂದ ಅಂಟಿರಿಯರ್ ಲೆನ್ಸ್ ಕ್ಯಾಪ್ಸೂಲ್ ಕಸಿ ಮಾಡಬಹುದಾಗಿದೆ. ಇಂತಹದ್ದೊಂದು ಶಸ್ತ್ರ ಚಿಕಿತ್ಸೆಯನ್ನು ಕಿಮ್ಸ್‌ನಲ್ಲಿ ಪ್ರಥಮ ಬಾರಿಗೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಅಲ್ಲದೆ ಜಗತ್ತಿನಲ್ಲಿಯೇ ಪ್ರಥಮ ಬಾರಿಗೆ ಈ ವಿಧಾನದಿಂದ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.
ಜಗತ್ತಿನಲ್ಲಿ ಪ್ರಥಮ ಬಾರಿಗೆ ನೂತನ ಚಿಕಿತ್ಸಾ ವಿಧಾನ ಪರಿಚಯಿಸಿದ ಡಾ. ಸತೀಶ ಶೆಟ್ ಮತ್ತು ಅವರ ತಂಡಕ್ಕೆ ಕಿಮ್ಸ್ ನಿರ್ದೇಶಕಿ ಡಾ. ವಸಂತಾ ಕಾಮತ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.