ಕರ್ನಾಟಕ ರಸಪ್ರಶ್ನೆ ಫಲಿತಾಂಶ ಪ್ರಕಟ
ಧಾರವಾಡ: ರಾಜ್ಯೋತ್ಸವ ನಿಮಿತ್ತ ಕರ್ನಾಟಕ ವಿದ್ಯಾವರ್ಧಕ ಸಂಘ ಏರ್ಪಡಿಸಿರುವ ಕನ್ನಡ ಹಬ್ಬದಲ್ಲಿ ಮಕ್ಕಳ ಮಂಟಪದಿಂದ ಪ್ರೌಢಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಕರ್ನಾಟಕ ರಸಪ್ರಶ್ನೆ ಫಲಿತಾಂಶ ಹೊರಬಿದ್ದಿದೆ.
ಜೆಎಸ್ಸೆಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ರತ್ನಾಕರ ಸಾವಂತ, ಸಂತೋಷ ಬಿಜಕಲ್, ವಿಶಾಲಾಕ್ಷಿ ಭಂಡಿವಾಡ ಪ್ರಥಮ ಬಹುಮಾನ ಹಾಗೂ ಸೇಂಟ್ ಜೋಸೆಫ್ ಶಾಲೆಯ ವಿನಿತ ಪಾವಟೆ, ಶ್ರೇಯಾ ಎ. ಎನ್, ಸುಶೀತ ತಡಹಾಳ ದ್ವಿತೀಯ ಬಹುಮಾನ ಮತ್ತು ಎಸ್ ಡಿಎಂ ಇಂಗ್ಲಿಷ್ ಮಾಧ್ಯಮ ಶಾಲೆಯ ಸಹನಾ ಬೆಟಗೇರಿ, ಷಣ್ಮುಖ, ರಶ್ಮಿ ಪಾಸನವರ ತೃತೀಯ ಬಹುಮಾನ ಪಡೆದಿದ್ದಾರೆ.
ಯುನಿವರ್ಸಿಟಿ ಪಬ್ಲಿಕ ಶಾಲೆಯ ಶಶಿಕುಮಾರ ನಾಟಿಕರ, ಹಸನಸಾಬ ಜಮಾಲಿ, ಮಂಜುನಾಥ ಮುಷ್ಟಿಗೇರಿ ಹಾಗೂ ವಿದ್ಯಾರಣ್ಯ ಪ್ರೌಢ ಶಾಲೆಯ ನಿಶಾಂತ ಮುರನಾಳ, ಶಿವಕುಮಾರ ಅಂಗಡಿ, ವಿಶಾಲ ಗೋಧಿ ಸಮಾಧಾನಕರ ಬಹುಮಾನ ಪಡೆದರು.
ಮಕ್ಕಳ ಮಂಟಪ ಸಂಚಾಲಕಿ ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು.