ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪಟ್ಟಭದ್ರರಿಂದ ಕರ್ನಾಟಕ ವಿವಿ ಘನತೆಗೆ ಧಕ್ಕೆ: ಧರಣಿ

Lingaraj Badiger
Updated On : 22 Nov 2013, 11:50 am

ಕನ್ನಡಪ್ರಭ ವಾರ್ತೆ, ಧಾರವಾಡ, ನ. 21
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅನಾವಶ್ಯಕವಾಗಿ ಪತ್ರಿಕಾ ಹೇಳಿಕೆ ಮತ್ತು ಪ್ರಕಟಣೆ ನೀಡುವ ಮೂಲಕ ಕರ್ನಾಟಕ ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿವೆ.
ಕವಿವಿ ಹಳೆ ವಿದ್ಯಾರ್ಥಿಗಳ ಒಕ್ಕೂಟ, ಅಂಬೇಡ್ಕರ್ ಪ್ರಗತಿಪರ ಸಮುದಾಯ ಸಂಸ್ಥೆ, ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿವೆ.
ಕವಿವಿಯಲ್ಲಿ ಕೆಲ ವ್ಯಕ್ತಿಗಳ ಕಾರ್ಯಗಳು ಸರಾಗವಾಗಿ ನಡೆಯದಿರುವ  ಹಿನ್ನೆಲೆಯಲ್ಲಿ ಸುಖಾಸುಮ್ಮನೆ ಅವ್ಯವಹಾರಗಳ ಆರೋಪ ಮಾಡುವ ಮೂಲಕ ವಿವಿಯ ಘನತೆಗೆ ಕುಂದು ತರುತ್ತಿದ್ದಾರೆ. ಅಲ್ಲದೆ, ಪ್ರಚಾರಕೋಸ್ಕರ ಸುದ್ದಿಗೋಷ್ಠಿಗಳನ್ನು ಮಾಡುತ್ತಿದ್ದಾರೆ.  ಯಾವ ಅವ್ಯವಹಾರಗಳು ನಡೆದಿಲ್ಲ ಎಂದು ಕುಲಪತಿಗಳು ಸ್ಪಷ್ಟನೆ ನೀಡಿದರೂ ಸಹ ವಿವಿ ಘನತೆಗೆ ಕುಂದು ತರಲಾಗುತ್ತಿದೆ. ಆದ್ದರಿಂದ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕೆಂದು ಮಂಜುನಾಥ ಹೊಸಗೂರ, ಎಸ್.ಎಸ್. ನಿಟ್ಟೂರ, ಬಸವರಾಜ ಟಿ.ಪಿ, ಶಿವರಾಜ ಯತಗಲ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement