ಮೆಹಬೂಬಸಾಬ್ ಮರು ಆಯ್ಕೆ
ಕುಂದಗೋಳ: ಧಾರವಾಡದ ನೌಕರ ಭವನದಲ್ಲಿ ಇತ್ತೀಚೆಗೆ ನದಾಫ್, ಪಿಂಜಾರ ಸಮಾಜದವರು ಸಭೆ ಸೇರಿ, ಜಿಲ್ಲೆಯ ರಾಜ್ಯ ಪ್ರತಿನಿಧಿಯನ್ನಾಗಿ 3ನೇ ಬಾರಿಗೆ ತಾಲೂಕಿನ ಯರೇಬೂದಿಹಾಳದ ಮೆಹಬೂಬಸಾಬ ಮೌಲಾಸಾಬ ನದಾಫ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು. ಚುನಾವಣೆಯ ವೀಕ್ಷಕರಾಗಿ ಜಿಲ್ಲಾ ಉಪಾಧ್ಯಕ್ಷ ಫಕ್ರುಸಾಬ ಹಳೇಮನಿ, ಹು-ಧಾ ಮಹಾನಗರ ಪಾಲಿಕೆ ಸದಸ್ಯ ಹಜರತ್‌ಅಲಿ ದೊಡಮನಿ, ಎಂ.ಎಚ್. ಬೆಂಡಿಗೇರಿ, ಪ್ರೊ. ಎಂ.ಎಂ. ನದಾಫ್‌ಇತರರು ಪಾಲ್ಗೊಂಡಿದ್ದರು.
--
ಹುಲಸ್ವಾರ ಮಹಾರ ಸಂಘ ಸ್ಥಾಪನೆ
ಧಾರವಾಡ: ಹುಲಸ್ವಾರ ಮಹಾರ ಸಂಘದ ಅಧ್ಯಕ್ಷ ಎಂದು ಮಹಾದೇವಪ್ಪ ಕಾಂಬಳೆ ಆಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷರಾಗಿ ರಾಜು ಕಚ್ಚೇಕರ್, ಪ್ರಧಾನ ಕಾರ್ಯದರ್ಶಿಯಾಗಿ ರುದ್ರಪ್ಪ ಸೋಮವಂಶಿ, ಖಜಾಂಚಿಯಾಗಿ ಸಂತೋಷ ತುಪಸುಂದರ, ಸಹ ಕಾರ್ಯದರ್ಶಿಯಾಗಿ ಪ್ರಕಾಶ ಕಟಾವಕರ, ಸಂಘಟನಾ ಕಾರ್ಯದರ್ಶಿಯಾಗಿ ಶಂಕರ ಕಚ್ಚೇಕರ ನೇಮಕಗೊಂಡಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎ.ವೈ. ಜಾಧವ, ಎಸ್.ಎಸ್. ರಾಜಗುರಿ, ಎ.ಎಸ್. ಕಾಳೆ, ಎಂ.ಕೆ. ತುಪಸುಂದರ, ಎಸ್.ಸಿ. ತುಪಸುಂದರ, ಎಂ.ಎನ್. ಲೋಖಂಡೆ, ಎಂ.ಪಿ. ತುಪಸುಂದರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.