ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುದ್ದಿ ಸಂಕ್ಷೇಪ

Mainashree
Updated On : 23 Nov 2013, 11:04 am

ಹುಬ್ಬಳ್ಳಿ ಕಲಾವಿದರಿಗೆಅವಕಾಶ ನೀಡಿ
ಹುಬ್ಬಳ್ಳಿ: ಧಾರವಾಡ ಉತ್ಸವದಲ್ಲಿ ಹುಬ್ಬಳ್ಳಿ ಕಲಾವಿದರಿಗೂ ಅವಕಾಶ ನೀಡಬೇಕು. ವಿದುಷಿ ಉರ್ಮಿಳಾ ಪಾತ್ರಾರನ್ನು ಧಾರವಾಡ ಉತ್ಸವ ನೃತ್ಯ ಸಮಿತಿಯಿಂದ ಕ್ಷಮೆ ಕೋರಿ ಅವರನ್ನು ಮುಖ್ಯ ವೇದಿಕೆಯಲ್ಲಿ ಸನ್ಮಾನಿಸಬೇಕು. ಜತೆಗೆ  ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಧಿಕಾರಿ ಹಾಗೂ ಧಾರವಾಡ ಉತ್ಸವ ಸಮಿತಿ ಪದಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ರಾಧಾಕೃಷ್ಣ ಸಂಸ್ಥೆಯ ಹಿರಿಯ ನೃತ್ಯ ನಿರ್ದೇಶಕ ಮನೀಷ ಶಿಂಧೆ ಆಗ್ರಹಿಸಿದ್ದಾರೆ. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಧಾರವಾಡದ ಮುಖ್ಯ ವೇದಿಕೆಯಾದ ಕೆಸಿಡಿ ಮೈದಾನದಲ್ಲಿ ಉತ್ಸವದ ಉಪಸಮಿತಿಯು ಕೇವಲ ಧಾರವಾಡದವರಿಗೆ ಅವಕಾಶ ನೀಡುತ್ತ ಬಂದಿದೆ. ಇಲ್ಲಿ ಹುಬ್ಬಳ್ಳಿ ಕಲಾವಿದರಿಗೂ ಅವಕಾಶ ನೀಡಬೇಕು ಎಂದು ಕೋರಿದರು. ಉತ್ಸವದಲ್ಲಿ ಈ ಹಿಂದೆ ಅವಕಾಶ ನೀಡಿದವರಿಗೇ ಮರಳಿ ಮತ್ತೆ ಅವಕಾಶ ನೀಡಲಾಗುತ್ತಿದೆ. ಹೊಸಬರಿಗೂ ಅವಕಾಶ ನೀಡಬೇಕು. ಜಾನಪದ, ಫ್ಯೂಜನ್, ಸೆಮಿಕ್ಲಾಸಿಕಲ್, ಸಮಕಾಲೀನ ನೃತ್ಯಗಳ ಗುರುಗಳಿಗೆ ಸಮಿತಿ ಅಧ್ಯಕ್ಷರ ಪಟ್ಟ ಕೊಡಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಈಡೇರದೇ ಇದ್ದರೆ ಧಾರವಾಡ ಉತ್ಸವ ಸಂದರ್ಭದಲ್ಲಿ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು. ಸುಧೀರ ಯಾದವ್, ಚೆನ್ನು ವಸ್ತ್ರದ, ಪ್ರೇರಣಾ ಶಿಂಧೆ ಮತ್ತಿತರರು ಗೋಷ್ಠಿಯಲ್ಲಿದ್ದರು.
ನಿವೃತ್ತ ನೌಕರರ ಸಭೆ
ಹುಬ್ಬಳ್ಳಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಮಹಾಮಂಡಳ ಆಶ್ರಯದಲ್ಲಿ ನಿವೃತ್ತ ನೌಕರರ ಸಭೆ ನಗರದ ಹೊಸೂರು ತಿಮ್ಮಸಾಗರದಲ್ಲಿ ನ. 23ರಂದು ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ. ನಿವೃತ್ತ ನೌಕರರಿಗೆ ಎಲ್ಲ ಮೂಲಗಳಿಂದ ಬರಬೇಕಿರುವ ಬಾಕಿ ಹಣ ಕೂಡಲೇ ಬಟವಡೆ ಮಾಡಬೇಕು. ನಿವೃತ್ತ ನೌಕರರ ಪಿಂಚಣಿ ಹೆಚ್ಚಳ ವಿಷಯ ಕುರಿತು, ಸಂಸ್ಥೆ ಪಾಸ್ ನೀಡುವ ಹಾಗೂ ಮತ್ತಿತರ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು. ಮಹಾಮಂಡಳದ ಪದಾಧಿಕಾರಿಗಳಾದ ಎ.ಆರ್. ಚವ್ಹಾಣ, ಎಂ.ಎಲ್. ಮುಂಡರಗಿ, ಎಂ.ಎನ್. ಪ್ರಭು ಮತ್ತಿತರರು ಸಭೆಯಲ್ಲಿ ಭಾಗವಹಿಸುವರು.
ಅಭಿಮನ್ಯು ಹಡಗಲಿ
ಧಾರವಾಡ: ನವನಗರ ಬಳಿಯ ಶಿವಾನಂದ ನಗರದ ನಿವಾಸಿ ಅಭಿಮನ್ಯು ಅರ್ಜುನಪ್ಪ ಹಡಗಲಿ (64) ನಿಧನರಾದರು. ರಾಜ್ಯ ಕೋ-ಆಪ್ ಮಾರ್ಕೇಟಿಂಗ್ ಫೆಡರೇಷನ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ದಿವಂಗತರು ಮೂಲತಃ ಕುಂದಗೋಳ ತಾಲೂಕು ಹರ್ಲಾಪುರ ಗ್ರಾಮದವರು, ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರಬಂಧು ಬಳಗವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement