ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

28ರಂದು ಸುವರ್ಣಸೌಧ ಚಲೋ

Mainashree
Updated On : 25 Nov 2013, 10:57 am

ಹುಬ್ಬಳ್ಳಿ: ಆಟೋ ರಿಕ್ಷಾ ಚಾಲಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ. 28ರಂದು ಉತ್ತರ ಕರ್ನಾಟಕ ಆಟೋ ಚಾಲಕರ ಒಕ್ಕೂಟದಿಂದ ಸುವರ್ಣಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಈಚೆಗೆ ಜರುಗಿದ ಆಟೋ ಚಾಲಕರ ಸಭೆಯಲ್ಲಿ ಉತ್ತರ ಕರ್ನಾಟಕ ಆಟೋ ಚಾಲಕರ ಒಕ್ಕೂಟ ರಚಿಸಲಾಗಿದ್ದು, ಆಟೋ ಚಾಲಕರ ಬೇಡಿಕೆಗೆಳ ಈಡೇರಿಕೆಗಾಗಿ ಒಕ್ಕೂಟದ ಮುಖಾಂತರ ಹೋರಾಟ ಮಾಡಲಾಗುವುದು ಎಂದರು.
ಬೆಳಗಾವಿಯಲ್ಲಿ ನ. 25ರಿಂದ ಆರಂಭವಾಗಲಿರುವ ಚಳಿಗಾಲ ಅಧಿವೇಶನಕ್ಕೆ ಮುತ್ತಿಗೆ ಹಾಕಿ ಆಟೋ ಚಾಲಕರಿಗೆ ಇಎಸ್‌ಐ ಸೌಲಭ್ಯ ನೀಡಬೇಕು. ಆಟೋ ಚಾಲಕರಿಗೆ ಪ್ರತ್ಯೇಕ ಕಾಲೋನಿ ನಿರ್ಮಿಸಬೇಕು. ಆಟೋ ರಿಕ್ಷಾಗಳ ಮೇಲಿನ ವಿಮಾ ಮೊತ್ತ ಮತ್ತು ರಾಜ್ಯ ಸರ್ಕಾರದ ಶೇ. 11.5 ತೆರಿಗೆಯನ್ನು ಕೈಬಿಡಬೇಕು. ಆಟೋ ಚಾಲಕರ ಮಕ್ಕಳಿಗೆ ಸರ್ಕಾರ 1ನೇ ತರಗತಿಯಿಂದ 10ನೇ ತರಗತಿವರೆಗೆ ವಿದ್ಯಾರ್ಥಿ ವೇತನ ನೀಡಬೇಕು. ಆಟೋ ಎಲ್‌ಪಿಜಿ ಮತ್ತು ಪೆಟ್ರೋಲ್ ಮೇಲೆ ವಿಧಿಸಿರುವ ತೆರಿಗೆ ರದ್ದು ಮಾಡಬೇಕು. ಆಟೋ ರಿಕ್ಷಾಗಳು ಅಪಘಾತಕ್ಕಿಡಾದರೆ ಅಂತಹ ಸಂದರ್ಭದಲ್ಲಿ ಐಪಿಸಿ 307ರ ಪ್ರಕಾರ ಕೇಸು ದಾಖಲಿಸಬಾರದು. ಅಸಂಘಟಿತ ಕಾರ್ಮಿಕ ಭದ್ರತಾ ಮಂಡಳಿಗೆ ಹೆಚ್ಚಿನ ನಿಧಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುವರ್ಣಸೌಧ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಹಕಾರ್ಯದರ್ಶಿ ಬಾಬಾಸಾಹೇಬ ಜಮಾದಾರ್, ಶಿವಾನಂದ ಖಾನಾಪುರ, ಕೋಶಾಧ್ಯಕ್ಷ ಅಬ್ದುಲ್ ಕರೀಂ ಬಳಗಾನೂರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement